ದೂದ್ ಸಾಗರ್ ನೋಡಲು ಬಂದ ಯುವಕರಿಗೆ ಬಸ್ಕಿ ಶಿಕ್ಷೆ (ವಿಡಿಯೋ ನೋಡಿ)
ಇಂದಿನಿಂದ ದೂಧ್ ಸಾಗರ್ ಪ್ರವಾಸಕ್ಕೆ ನಿರ್ಬಂಧ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾದ ದೂದ್ ಸಾಗರ್ ಜಲಪಾತ ಈಗ ಇನ್ನಷ್ಟು ರುದ್ರ ರಮಣೀಯವಾಗಿ ಧುಮ್ಮಿಕ್ಕುತ್ತಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಹಿನ್ನೆಲೆಯಲ್ಲಿ ದೂದ್ ಸಾಗರ್ ಜಲಪಾತ ಮತ್ತಷ್ಟು ಮನಮೋಹಕವಾಗಿ ಕಂಗೊಳಿಸುತ್ತಿದ್ದು, ಜಲಪಾತ ವೀಕ್ಷಣಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಈ ಮಧ್ಯೆ ದೂದ್ ಸಾಗರ್ ಪ್ರವಾಸಕ್ಕೆ ತೆರಳಿದ್ದ ಯುವಕರಿಗೆ ಪೊಲಿಸರು ಬಸ್ಕಿ ಶಿಕ್ಷೆ ನೀಡಿರುವ ಘಟನೆ ನಡೆದಿದೆ.
ವೀಕೆಂಡ್ ಕಾರಣಕ್ಕೆ ದೂದ್ ಸಾಗರ್ ಜಲಪಾತ ನೋಡಲು ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದಲು ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಈ ವೇಳೆ ನೂರಾರು ಜನರಿದ್ದ ಯುಕರ ಗುಂಪು ಗೋವಾ ಬಾರ್ಡರ್ ಮೂಲಕ ರೈಲ್ವೆ ಟ್ರ್ಯಾಕ್ ಮೇಲೆ ನಡೆದುಕೊಂಡು ಸಾಗಿದೆ. ಇದನ್ನು ಗಮನಿಸಿದ ರೈಲ್ವೆ ಪೊಲೀಸರು ಯುವಕರನ್ನು ತಡೆದು ಬಸ್ಕಿ ಶಿಕ್ಷೆ ನೀಡಿದ್ದಾರೆ. ನೂರಾರು ಯುವಕರಿಗೆ ಬಸ್ಕಿ ಹೊಡೆಯಲು ಹೇಳಿ ಬಸ್ಕಿ ಹೊಡೆದ ಬಳಿಕ ಯುವಕರನ್ನು ವಾಪಸ್ ಕಳುಹಿಸಿದ್ದಾರೆ.
ಇದೇ ವೇಳೆ ಇಂದಿನಿಂದ ಗೋವಾ ಸರ್ಕಾರ ದೂದ್ ಸಾಗರ್ ಜಲಪಾತಕ್ಕೆ ತೆರಳದಂತೆ ಪ್ರವಾಸಿಗರಿಗೆ ನಿಷೇಧ ಹೇರಿದೆ. ಮಳೆಗಾಲ ಹಿನ್ನೆಲೆಯಲ್ಲಿ ಸುರಕ್ಷತೆ ಕಾರಣಕ್ಕಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದು, ಮುನೆಚ್ಚರಿಕಾ ಕ್ರಮವಾಗಿ ದೂದ್ ಸಾಗರ್ ಜಲಪಾತ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಪೊಲೀಸರನ್ನು, ಅರಣ್ಯ ಇಲಾಖೆ ಸಿಬ್ಬಂದಿ, ರೈಲ್ವೆ ಸಿಬ್ಬಂದಿಗಳನ್ನು ನೇಮಕ ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ