*ಪೊಲೀಸರೇ ನಮ್ಮ ಮನೆಯಲ್ಲಿ ಗ್ರೆನೇಡ್ ತಂದಿಟ್ಟಿದ್ದಾರೆ; ಶಂಕಿತ ಉಗ್ರನ ಸಹೋದರನ ಗಂಭೀರ ಆರೋಪ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜುಲೈ 19ರಂದು ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ನಡುವೆ ಶಂಕಿತ ಉಗ್ರನ ಸಹೋದರನೊಬ್ಬ ಪೊಲೀಸರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾನೆ.
ಬಂಧಿತ ಶಂಕಿತ ಉಗ್ರರಲ್ಲಿ ಜಾಹಿದ್ ತಬ್ರೇಜ್ ಎಂಬಾತನ ಮನೆಯಲ್ಲಿ ಗ್ರೇನೇಡ್ ಪತ್ತೆಯಾಗಿದೆ. ಪೊಲೀಸರೇ ಗ್ರೆನೇಡ್ ತಂದಿಟ್ಟಿದ್ದಾರೆ ಎಂದು ಜಾಹಿದ್ ತಬ್ರೇಜ್ ಸಹೋದರ ಅವೇಜ್ ಹೇಳಿದ್ದಾನೆ.
ಸುದ್ದಿಗರರೊಂದಿಗೆ ಮಾತನಾಡಿದ ಅವೇಜ್, ಪೊಲೀಸರು ನನ್ನ ತಮ್ಮನನ್ನು ಕರೆದುಕೊಂಡು ಹೋಗಿದ್ದು, ಗ್ರೆನೇಡ್ ತಂಡಿಟ್ಟಿದ್ದಾರೆ. ನನ್ನ ಸಹೋದರ ಅಂತಹ ಕೆಲಸ ಮಾಡುವವನಲ್ಲ. ಅಲ್ಯೂಮಿನಿಯಂ ಫ್ಯಾಕರಿಯಲ್ಲಿ ಕೆಲಸ ಮಾಡಿಕೊಂಡು ತನ್ನ ಪಾಡಿಗೆ ತಾನಿದ್ದ. ನಾವಿಬ್ಬರೇ ಮನೆಯಲ್ಲಿ ದುಡಿಯುವವರು. 2017ರಲ್ಲಿ ಜುನೈದ್ ಜೊತೆ ಪ್ರಕರಣವೊಂದರಲ್ಲಿ ಅರೆಸ್ಟ್ ಆಗಿದ್ದ. ಬಳಿಕ ಜುನೈದ್ ಸಹವಾಸವನ್ನೇ ಜಾಹಿದ್ ತಬ್ರೇಜ್ ಬಿಟ್ಟಿದ್ದಾನೆ. ನಾವು ಸಂಸಾರಸ್ತರು. ನಾವ್ಯಾಕೆ ಗ್ರೆನೇಡ್ ತಂಡು ಇಟ್ಟುಕೊಳ್ಳುತ್ತೇವೆ? ನನ್ನ ತಮ್ಮ ಇಂತಹ ಕೆಲಸ ಮಾಡಿಲ್ಲ ಎಂದು ಹೇಳಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ