Latest

ಯಡಿಯೂರಪ್ಪನ ಪ್ಯಾಂಟು, ಶರ್ಟು ಎಲ್ಲಾ ಹರ್ದಾಕ್ತಾರೆ

ಯಡಿಯೂರಪ್ಪನ ಪ್ಯಾಂಟು, ಶರ್ಟು ಎಲ್ಲಾ ಹರ್ದಾಕ್ತಾರೆ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬಿದ್ದು ಇನ್ನೇನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರಬೇಕಿದೆ. ಆದರೆ ಯಡಿಯೂರಪ್ಪನವರಿಗೆ ಸರಕಾರ ರಚನೆ ಸರಳವಿದೆಯೇ? ಮೈತ್ರಿ ಸರಕಾರ ಬೀಳಿಸಿದ ಅತೃಪ್ತ ಶಾಸಕರು ಯಡಿಯೂರಪ್ಪನವರಿಗೆ ಸರಕಾರ ರಚಿಸಲು ಸುಲಭವಾಗಿ ಬಿಡುತ್ತಾರಾ?

Home add -Advt

ಈ ಬಗ್ಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.  ನಾವು ಸಾಕಿ, ಸಲಹಿದ ನಮ್ಮನ್ನೇ ಬಿಟ್ಟಿಲ್ಲ. ಇನ್ನು ಯಡ್ಯೂರಪ್ಪನವರನ್ನು ಬಿಡುತ್ತಾರಾ ಎಂದು ಅವರು ಪ್ರಶ್ನಿಸಿದ್ದಾರೆ.

ಅವರೆಲ್ಲ ಅತೃಪ್ತರಲ್ಲ. ಸಂತೃಪ್ತರು. ಯಡಿಯೂರಪ್ಪ ತಮ್ಮ ಜೊತೆಗೇ ಅವರನ್ನೆಲ್ಲ ಸೇರಿಸಿಕೊಂಡು ಸರಕಾರ ರಚಿಸಿದರೆ ಸರಿ. ಇಲ್ಲವಾದಲ್ಲಿ ಅವರ ಪ್ಯಾಂಟು, ಶರ್ಟು ಎಲ್ಲ ಹರಿದು ಹಾಕುತ್ತಾರೆ. ಹರ್ಕೊಂಡ್ ನುಂಗಿ ಬಿಡ್ತಾರೆ. ಅವರೆಲ್ಲ ಈಗಾಗಲೆ ಖಾತೆ ಹಂಚಿಕೊಂಡಾಗಿದೆ. ಮಹೇಶ ಕುಮಟಳ್ಳಿ ಒಬ್ಬರು ಸುಮ್ಮನಿರಬಹುದು. ಉಳಿದವರು ಸುಮ್ಮನಿರುತ್ತಾರಾ, ನುಂಗಿ ಹಾಕ್ತಾರೆ ಎಂದು ಡಿಕೆಶಿ ಪ್ರಶ್ನಿಸಿದರು.

ತಮ್ಮ ಜೊತೆಗೇ ಅವರನ್ನೂ ಸಂಪುಟಕ್ಕೆ ಸೇರಿಸಿಕೊಂಡರೆ ಸರಿ. ಇಲ್ಲವಾದರೆ ಯಡ್ಯೂರಪ್ಪ ಗೋವಿಂದ ಗೋವಿಂದ ಎಂದೂ ಅವರು ಎಚ್ಚರಿಸಿದರು.

ಮೈತ್ರಿ ಮಾಡಿದ್ದು ರಾಹುಲ್ ಗಾಂಧಿ ಅವರು. ಅವರು ಏನು ಹೇಳುತ್ತಾರೆ. ಹಾಗೆ ಮಾಡುತ್ತೇವೆ. 14 ತಿಂಗಳ ಒಟ್ಟಿಗೆ ಕೆಲಸ ಮಾಡಿದ್ದೇವೆ. ಯಾರೋ ಸರಕಾರ ಬೀಳಿಸಿದರೆಂದಾಕ್ಷಣ ಜಗಳ ಮಾಡಲಾಗುವುದಿಲ್ಲ. ಹೈಕಮಾಂಡ್ ಏನು ಹೇಳುತ್ತದೆಯೋ ಹಾಗೆ ಕೇಳುತ್ತೇವೆ ಎಂದರು.

ಸಂಪೂರ್ಣ ಮಾತು ಕೇಳಲು ವೀಡಿಯೋ ಕ್ಲಿಕ್ ಮಾಡಿ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button