ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕಾಡೆಮಿ ಆಫ್ ಫ್ಯಾಮಿಲಿ ಫಿಸಿಷಿಯನ್ಸ್ ಆಫ್‌ಇಂಡಿಯಾ (ಎಎಫ್‌ಪಿಐ) ಕರ್ನಾಟಕ ಚಾಪ್ಟರ್ ಮತ್ತು ಯುಎಸ್‌ಎಂ ಕೆಎಲ್ಇಯ ಫ್ಯಾಮಿಲಿ ಮೆಡಿಸಿನ್ ವಿಭಾಗದ ಸಂಯುಕ್ತಾಶ್ರಯದಲ್ಲಿ ಕುಟುಂಬ ವೈದ್ಯರ 4ನೇ ವಾರ್ಷಿಕ ಸಮ್ಮೇಳನ ನಡೆಯಿತು.
ಸಮ್ಮೇಳನದಲ್ಲಿ ದೇಶವ್ಯಾಪಿ ವೈದ್ಯ ವಿದ್ಯಾರ್ಥಿಗಳು, ಸಂಶೋಧಕರು, ವೈದ್ಯಕೀಯ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೈಸ್ ಏರ್ ಮಾರ್ಷಲ್ ಡಾ. ಸಾಧನಾ ಎಸ್. ನಾಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ರಮಣ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಯುಎಸ್ಎಂ ಕೆಎಲ್ ಇ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ ಅತಿಥಿಯಾಗಿ ಭಾಗವಹಿಸಿದ್ದರು.
ಅಕಾಡೆಮಿ ಆಫ್ ಫ್ಯಾಮಿಲಿ ಫಿಜಿಶಿಯನ್ಸ್ ಇಂಡಿಯಾದ ಉಪಾಧ್ಯಕ್ಷ ಡಾ. ಮೋಹನ ಕುಬೇಂದ್ರ, ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ.ರಾಮಕೃಷ್ಣಪ್ರಸಾದ, ಹಾಗೂ ಕಾರ್ಯದರ್ಶಿ ಡಾ.ಹರ್ಷಪ್ರಿಯಾ ಜೆ. ಉಪಸ್ಥಿತರಿದ್ದರು.
ಸಂಘಟನಾಧ್ಯಕ್ಷೆ ಡಾ.ಗೀತಾ ಪಾಂಗಿ, ಸಂಘಟನಾ ಕಾರ್ಯದರ್ಶಿ ಡಾ.ಸ್ಮೃತಿ ಹವಳ, ಕೋಶಾಧಿಕಾರಿ ಡಾ.ವೀರೇಂದ್ರ ಅಷ್ಟಗಿ, ಡಾ.ಶಶಿಕಲಾ ಪಾಂಗಿ, ಡಾ.ಸವಿತಾ ರಾಮನಕಟ್ಟಿ, ಡಾ.ಟ್ವಿಂಕಲ್ ಬೆಹಲ್, ಡಾ.ಸುಧೀರ ಕಾಮತ, ಡಾ.ಇಮ್ರಾನ್ ಜಗದಾಳ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ