Belagavi NewsBelgaum NewsKannada News

ಜನತಾ ದರ್ಶನ ನಡೆಸಿದ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಚಿಕ್ಕೋಡಿ ಪಟ್ಟಣದ ಸಂಸದರ ಕಚೇರಿಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಜನಸಂಪರ್ಕ ಸಭೆ (ಜನತಾ ದರ್ಶನ) ಆಯೋಜಿಸಿದ್ದರು.

ಲೋಕಸಭಾ ಕ್ಷೇತ್ರದ ವಿವಿಧ ಕಡೆಯಿಂದ ಸುಮಾರು ೫೦೦ಕ್ಕೂ ಹೆಚ್ಚು ಜನ ಬಂದಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರ ಮನವಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರು ಹಾಗೂ ಕೆಲ ಅಹವಾಲಗಳಿಗೆ ಸರ್ಕಾರಿ ಅಧಿಕಾರಿಗಳ ಮೂಲಕ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಿದರು.

ಜನಸಂಪರ್ಕ ಸಭೆಯಲ್ಲಿ ಹಲವಾರು ಮನವಿಗಳನ್ನು ಸ್ವೀಕರಿಸಿ, ಸದ್ಯದಲ್ಲಿ ಅವರೆಲ್ಲರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಇದೇ ಸಮಯದಲ್ಲಿ, ಸಂಸದರ ಶಿಫಾರಸ್ಸಿನ ಮೂಲಕ ಬಿಡುಗಡೆಯಾದ ಮುಖ್ಯಮಂತ್ರಿ ಪರಿಹಾರ ನಿಧಿಯ ಆದೇಶ ಪತ್ರವನ್ನು ಯಾದ್ಯಾನವಾಡಿ ಗ್ರಾಮದ ಮಲ್ಲಪ್ಪಾ ಬಾಳು ಖರತರವರಿಗೆ ವಿತರಿಸಿದರು.
ಇಲ್ಲಿಯವರೆಗೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಂಸದರ ಶಿಫಾರಸ್ಸಿನ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ೨೭೬ ಜನರಿಗೆ ರೂ. ೮೧.೧೪ ಲಕ್ಷ ಅನುದಾನ ಮಂಜೂರು ಪಡೆದು ಅನುಕೂಲ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡೆ, ಪುರಸಭೆ ಸದಸ್ಯ ಸಂಜಯ ಕವಟಗಿಮಠ, ಹೆಸ್ಕಾಂ ನಿರ್ದೇಕರಾದ ಮಹೇಶ ಭಾತೆ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಅಪ್ಪಾಜಿಗೋಳ, ಸಂಜಯ ಪಾಟೀಲ, ಸಿದ್ದಪ್ಪಾ ಡಂಗೇರ, ಚಿಕ್ಕೋಡಿ ಬಿಜೆಪಿ ಯುವ ಮೊರ್ಚಾದ ವಿಕಾಸ ಪಾಟೀಲ, ಅಶೋಕ ಹರಗಾಪೂರೆ, ಚಿಕ್ಕೋಡಿಯ ತಹಸಿಲ್ದಾರ ಸಿ.ಎಸ್. ಕುಲಕರ್ಣಿ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಜನ ಸಂಪರ್ಕ ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button