Belagavi NewsBelgaum NewsKannada NewsKarnataka News

ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಣಾ ಸಭೆ

ಗ್ರಾಹಕರ ದೂರುಗಳ ತ್ವರಿತ ವಿಲೇವಾರಿಗೆ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗ್ರಾಹಕರ ನೊಂದಾಯಿತ ದೂರುಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು. ಗ್ರಾಹಕರ ಸಮಸ್ಯೆಗಳು ಪೂನರಾವರ್ತನೆಯಾಗದಂತೆ ಅಧಿಕಾರಿ, ಸಿಬ್ಬಂದಿಗಳು ಎಚ್ಚರ ವಹಿಸಬೇಕು ಎಂದು ಹೆಸ್ಕಾಂ, ಬೆಳಗಾವಿ ಕಾರ್ಯ ಮತ್ತು ಪಾಲನಾ, ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸುನಿಲ್ ಕುಮಾರ್.ವಿ ಅವರು ಸೂಚಿಸಿದರು. 

ನೆಹರೂ ನಗರದ ನಗರ ಉಪ ವಿಭಾಗ-3 ಕಚೇರಿಯ ಸಭಾ ಭವನದಲ್ಲಿ ಶನಿವಾರ (ಆ.19) ನಡೆದ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಭಾಗವಹಿಸಿದ ಗ್ರಾಹಕರಾದ ಮಹೇಶ ಪಾಟೀಲ ಅವರು ಗ್ರಾಹಕರು ಜೂನ ತಿಂಗಳ ವಿದ್ಯುತ ಬಿಲ್ಲಿನಲ್ಲಿ ಬಳಕೆ ಮೊತ್ತದಲ್ಲಿ ಏರಿಕೆ ಕಂಡುಬಂದಿರುತ್ತದೆ ಎಂದು ವಿಚಾರಿಸಿದಾಗ, ಕೂಡಲೇ ದೋಷವನ್ನು ಸರಿಪಡಿಸಿ ಕೊಡಲಾಯಿತು.

ಗ್ರಾಹಕರಾದ ಅಪ್ಪಾಸಾಹೇಬ ನರಟ್ಟಿ ಹಾಗೂ ಶ್ರೀಕಾಂತ ಹೆಗಡೆ ಇವರು ಗೃಹ ಬಳಕೆಯ(ಎಲ್‌ಟಿ-2ಎ) ಸಲುವಾಗಿ ವಿದ್ಯುತ ಮಂಜೂರಾತಿ ಪಡೆದುಕೊಂಡಿದ್ದು, ವಿಚಾರಿಸಿದಾಗ ಅವರಿಗೆ ಸದರಿ ವಿಷಯದ ಬಗ್ಗೆ ತಿಳಿಸಿ ಜಕಾತಿ ಬದಲಾವಣೆ ಮಾಡಿಕೊಳ್ಳಲು ತಿಳಿಸಲಾಯಿತು.

ಅದೇ ರೀತಿಯಲ್ಲಿ ನೇಮಚಂದ್ರ ಮಲಾಯಿ ಗ್ರಾಹಕರು ಜೂನ ತಿಂಗಳಿನಲ್ಲಿ ಗೃಹ ಬಳಕೆಯ ಸಲುವಾಗಿ ವಿದ್ಯುತ ಮಂಜೂರಾತಿ ಪಡೆದುಕೊಂಡಿದ್ದು, “ಗೃಹಜ್ಯೋತಿ” ಯೋಜನೆ ಅಡಿಯಲ್ಲಿ ತಮ್ಮ ಹೆಸರನ್ನು ನಮೂದಿಸಿಕೊಂಡಿರುತ್ತಾರೆ. ಈ ತಿಂಗಳ ವಿದ್ಯುತ್ ಬಿಲ್ಲಿನಲ್ಲಿ ಅರ್ಹ ಯುನಿಟ ಕೇವಲ 58 ಯುನಿಟಗಳು ಬಂದಿರುತ್ತದೆ ಎಂದು ವಿಚಾರಿಸಿದಾಗ, ತಮ್ಮ ಸ್ಥಾವರವು ಹೊಸ ವಿದ್ಯುತ ಸಂಪರ್ಕವಿರುವುದರಿಂದ ಇಂಧನ ಇಲಾಖೆಯ ಆದೇಶದ ಪ್ರಕಾರ “ಗೃಹಜ್ಯೋತಿ” ಯೋಜನೆಯಡಿ ಹೊಸ ವಿದ್ಯುತ ಸಂಪರ್ಕ ಪಡೆದುಕೊಂಡ ಗೃಹ ಬಳಕೆಯ ಫಲಾನುಭವಿಗಳಿಗೆ ಅರ್ಹ ಯುನಿಟ 58 ಎಂದು ನಿಗದಿಪಡಿಸಿರುವುದನ್ನು ತಿಳಿಸಲಾಯಿತು. 

ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ತಾತ್ಕಾಲಿಕ ವಿದ್ಯುತ ಸಂಪರ್ಕ ಪಡೆದುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗೂ ವಿದ್ಯುತ್‌ ಮುಂಜಾಗ್ರತಾ ಕ್ರಮಗಳ ಕುರಿತು ವಿಸ್ತಾರವಾಗಿ ಸಭೆಯಲ್ಲಿ ವಿವರಿಸಲಾಯಿತು.

ಗೃಹಜ್ಯೋತಿ ಯೋಜನೆ ಅನುಷ್ಠಾನಕ್ಕಾಗಿ ಅರ್ಹ ಯೂನಿಟ್ ಗಳನ್ನು ಸಮರ್ಪಕವಾಗಿ ಉಪಯೋಗಿಸಿ ಎಲ್ಲಾ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಲು ಹೆಸ್ಕಾಂ ಅಧಿಕಾರಿಗಳು ವಿನಂತಿಸಿದರು.

ನಗರ ಉಪ ವಿಭಾಗ-3ರ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಎ. ಎಂ.ಶಿಂಧೆ, ಹೆಸ್ಕಾಂ ವಿವಿಧ ವಿಭಾಗಗಳ ಸಹಾಯಕ ಇಂಜಿಯರ ವಿ.ವಿ ಬಂಗಾರಶೆಟ್ಟರ್, ಪವನ ಕುಮಾರ್ ಬಿ.ಎಸ್ ಸೇರಿದಂತೆ ಹೆಸ್ಕಾಂ ಅಧಿಕಾರಿ, ಸಿಬ್ಬಂದಿ ಹಾಗೂ ಗ್ರಾಹಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button