Kannada NewsKarnataka NewsLatest

4 ದಿನದ ನವಜಾತ ಹೆಣ್ಣು ಶಿಶು ಪತ್ತೆ

4 ದಿನದ ನವಜಾತ ಹೆಣ್ಣು ಶಿಶು ಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ 4 ದಿನದ ಹೆಣ್ಣು ಶಿಶುವೊಂದು ಪತ್ತೆಯಾಗಿದೆ.

ಅಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್ ಹತ್ತಿರ ಜುಲೈ 28 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ 4 ದಿನದ ನವಜಾತ ಹೆಣ್ಣು ಶಿಶು ಸಿಕ್ಕಿದೆ. ಸದ್ಯ ಮಗು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಎನ್.ಐ.ಸಿ.ಯು) ಚಿಕಿತ್ಸೆ ಪಡೆಯುತ್ತಿದೆ.
ಮಗುವಿನ ಜೈವಿಕ ಪಾಲಕರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಾಜಿ ನಗರ, ೩ನೇ ಅಡ್ಡರಸ್ತೆ, ವೀಕ್ಷಣಾಲಯ ಆವರಣ, ಬೆಳಗಾವಿ (ದೂ: ೦೮೩೧-೨೪೭೪೧೧೧, ೯೪೪೮೩೪೭೭೫೮, ೭೪೦೬೨೭೨೨೪೬) ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Home add -Advt

Related Articles

Back to top button