ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: 2023ರ ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿಯನ್ನು ಟೈಮ್ ನಿಯತಕಾಲಿಕೆ ಪ್ರಕಟಿಸಿದ್ದು, ಮೈಕ್ರೋಸಾಫ್ಟ್ ಸಂಸ್ಥೆ 96.46 ಅಂಕಗಳೊಂದಿಗೆ ವಿಶ್ವದ ಅತ್ಯುತ್ತಮ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟೈಮ್ ಮ್ಯಾಗಝಿನ್ ಮತ್ತು ಸ್ಟಾಟಿಶಿಯಾ ಸಂಸ್ಥೆಗಳು ಸೇರಿ ವಿಶ್ವದ ಒಟ್ಟು 750 ಅತ್ಯುತ್ತಮ ಕಂಪನಿಗಳ ಪಟ್ಟಿ ತಯಾರಿಸಿದ್ದು, ಇದರಲ್ಲಿ ಅಮೆರಿಕದ ಟೆಕ್ ಕಂಪನಿಗಳಾದ ಮೈಕ್ರೋಸಾಫ್ಟ್, ಆ್ಯಪಲ್, ಆಲ್ಫಬೆಟ್ (ಗೂಗಲ್) ಮತ್ತು ಮೆಟಾ ಪ್ಲಾಟ್ಫಾರ್ಮ್ಸ್ (ಫೇಸ್ಬುಕ್) ಟಾಪ್ 4 ಅತ್ಯುತ್ತಮ ಕಂಪನಿಗಳೆಂದು ಪರಿಗಣಿತವಾಗಿವೆ.
ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ 100 ಕಂಪನಿಗಳಲ್ಲಿ ಇನ್ಫೋಸಿಸ್ ಏಕೈಕ ಭಾರತೀಯ ಕಂಪನಿ ಅಗ್ರ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಇನ್ಫೋಸಿಸ್ 88.38 ಅಂಕಗಳನ್ನು ಪಡೆದು 64ನೇ ಸ್ಥಾನದಲ್ಲಿದೆ.
ಇನ್ಫೋಸಿಸ್ ಕಂಪನಿ ಈ ಖುಷಿಯನ್ನು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಶೇರ್ ಮಾಡಿದ್ದು, ವಿಶ್ವದ 3 ವೃತ್ತಿಪರ ಸೇವೆಗಳ ಸಂಸ್ಥೆಗಳ ಪೈಕಿ ಒಂದೆನಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ