ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2007, ಸೆಪ್ಟೆಂಬರ್ 19… ಈ ದಿನವನ್ನು ಭಾರತೀಯ ಕ್ರಿಕೆಟಿಗರು ಎಂದೂ ಮರೆಯುವುದಿಲ್ಲ..ವಿಶ್ವಮಟ್ಟದಲ್ಲಿ ಚುಟುಕು ಕ್ರಿಕೆಟ್ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ.. T20 ಕ್ರಿಕೆಟ್‌ಗೆ ಪ್ರೋತ್ಸಾಹ ನೀಡುವ ಸಲುವಾಗಿಯೇ ಅಂತಾರಾಷ್ಟಿಯ ಕ್ರಿಕೆಟ್ ಸಮಿತಿ (ಐಸಿಸಿ) ಈ ಮಾದರಿಯಲ್ಲಿ ವಿಶ್ವಕಪ್ ಆರಂಭಿಸಿತು. ಚೊಚ್ಚಲ T20 ವಿಶ್ವಕಪ್‌ನಲ್ಲೇ ಭಾರತ ಚಾಂಪಿಯನ್‌ಪಟ್ಟ ಅಲಂಕರಿಸಿತು. ಆದರೆ, ಟೂರ್ನಿಯಲ್ಲಿ ಹೈಲೈಟ್ ಆದವರು ಎಡಗೈ ಆಲ್ರೌಂಡರ್ ಯುವರಾಜ್ ಸಿಂಗ್. ಏಕಪ್ಪ ಅಂತೀರಾ.. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ನ 6 ಎಸೆತಗಳನ್ನು ಸಿಕ್ಸರ್‌ಗಟ್ಟಿ ಯುವಿ ದಾಖಲೆ ನಿರ್ಮಿಸಿದರು. ಯುವಿಯ ಈ ದಾಖಲೆಗೆ ಇಂದಿಗೆ 16 ವರ್ಷಗಳಾಯ್ತು.. ಡರ್ಬನ್‌ನ ಕಿಂಗ್ಸ್ಮೇಡ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಈ ಪಂದ್ಯದ ಕ್ರಿಕೆಟ್ ಇತಿಹಾಸದಲ್ಲಿ ಯುವರಾಜ್ ಅವರನ್ನು ಚಿರಸ್ಥಾಯಿಗೊಳಿಸಿದೆ.
ಕೆಣಕಿ ಕೆಟ್ಟ ಫ್ಲಿಂಟಾಫ್:
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸಾಧಾರಣ ಮೊತ್ತದತ್ತ ಮುಖಮಾಡಿತ್ತು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ಯುವರಾಜ್ ಅವರನ್ನು ಎದುರಾಳಿ ತಂಡದ ಆಂಡ್ರ್ಯೂ ಫ್ಲಿಂಟಾಫ್ ಪದೆ ಪದೆ ಕೆಣಕುತ್ತಿದ್ದರು. ಒಂದು ಹಂತದಲ್ಲಿ ಇಬ್ಬರ ನಡುವೆ ಮೈದಾನದಲ್ಲೇ ವಾಗ್ವಾದ ನಡೆಯಿತು. ಸ್ಟುವರ್ಟ್ ಬ್ರಾಡ್ ಇನಿಂಗ್ಸ್ನ 19ನೇ ಓವರ್ ಎಸೆಯಲು ಬಂದರು. ಈ ಓವರ್‌ನಲ್ಲಿ 6 ಎಸೆತಗಳನ್ನು ಸಿಕ್ಸರ್‌ಗಟ್ಟುವ ಮೂಲಕ ಯುವಿ ದಾಖಲೆ ಬರೆದರು.
T20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಅಲ್ಲದೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದು T20 ಕ್ರಿಕೆಟ್‌ನಲ್ಲಿ ದಾಖಲಾದ ಅತಿವೇಗದ ಅರ್ಧಶತಕ ಎನಿಸಿಕೊಂಡಿತು. 2000ರಲ್ಲಿ ಅಂತಾರಾಷ್ಟಿಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯುವರಾಜ್ ಸಿಂಗ್, 2007ರ T20, 2011ರ ಏಕದಿನ ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಎರಡೂ ಟೂರ್ನಿಗಳಲ್ಲೂ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 2019 ರಲ್ಲಿ, ಯುವರಾಜ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. 304 ಏಕದಿನ, 58 T20 ಹಾಗೂ 40 ಟೆಸ್ಟ್ ಪಂದ್ಯಗಳಿAದ 11,778 ರನ್ ಬಾರಿಸಿದ್ದಾರೆ. ಈ ಪೈಕಿ ಮೂರು ಮಾದರಿಗಳಿಂದ 148 ವಿಕೆಟ್ ಕಬಳಿಸಿದ್ದು, 17 ಶತಕ, 71 ಅರ್ಧಶತಕ ಸಿಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ