Cancer Hospital 2
Beereshwara 36
LaxmiTai 5

*ದರೋಡೆ ಪ್ರಕರಣ: 9 ಆರೋಪಿಗಳನ್ನು ಬಂಧಿಸಿದ ಗೋಕಾಕ್ ಪೊಲೀಸರು*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ; ಗೋಕಾಕ್: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಗೋಕಾಕ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರು ಗೋಕಾಕ ಶಹರ, ಅಂಕಲಗಿ, ಗೋಕಾಕ ಗ್ರಾಮೀಣ ಭಾಗಗಳಲ್ಲಿ ದರೋಡೆ, ಸುಲಿಗೆ, ಬೈಕ್ ಹಾಗೂ ಜಾನುವಾರು ಕಳ್ಳತನ ಮಾಡುತ್ತಿದ್ದರು. ಗುರುನಾಥ ವಿರೂಪಾಕ್ಷ ಬಡಿಗೇರ ಎಂಬುವವರು ಆ.14ರಂದು ತಮ್ಮ ಬೈಕ್ ಅಡ್ಡಗಟ್ಟಿ ದರೋಡೆಕೋರರು ಚಿನ್ನದ ಚೈನ್, ಉಂಗುರ ಕದ್ದು ಪರಾರಿಯಾಗಿದ್ದಾಗಿ ಗೋಕಾಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ ಪಿ, ಗೋಕಾಕ ವೃತ್ತ ಸಿಪಿಐ ಗೋಪಾಲ ಆರ್.ರಾಥೋಡ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಬೆನಚಿನಮರಡಿ ಖಿಲಾರಿ ಗ್ಯಾಂಗ್ ಹಾಗೂ ಗೋಕಾಕ್ ಎಸ್.ಪಿ ಸರ್ಕಾರ ಗ್ಯಾಂಗ್ ಗಳ 9 ಡಕಾಯಿತರನ್ನು ಬಂಧಿಸಿದ್ದಾರೆ.

Emergency Service

ಬಂಧಿತರಿಂದ 7,89,700 ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು, 19 ಮೊಬೈಲ್, 16 ಬೈಕ್, ಒಂದು ಅಶೋಕ ಲೈಲ್ಯಾಂಡ್ ವಾಹನ, ನಾಲ್ಕು ಜಂಬೆ-ತಲವಾರ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಮೂಲಕ 3 ಸುಲಿಗೆ-ಡಕಾಯಿತಿ, 12 ಜಾನುವಾರು ಕಳ್ಳತನ, ಹಾಗೂ ಬೈಕ್ ಕಳ್ಳತನ ಪ್ರಕರಣ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


Bottom Add3
Bottom Ad 2