Belagavi NewsBelgaum NewsEducationFilm & EntertainmentKarnataka News

*ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಮ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೊಲ್ಲೆ ಗ್ರೂಪ್‌ನ ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಮ್ ಪಬ್ಲಿಕ್ ಶಾಲೆ, (ಸಿ.ಬಿ.ಎಸ್.ಇ)  ನಣದಿ ಕ್ಯಾಂಪಸ್‌ನಲ್ಲಿ  ಸನ್ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪದ ಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೊಲ್ಲೆ ಸಂಸ್ಥೆಯ ಸಹ ಸಂಸ್ಥಾಪಕರು ಹಾಗೂ  ನಿಪ್ಪಾಣಿಯ ಶಾಸಕರಾದ ಶಶಿಕಲಾ ಜೊಲ್ಲೆ ಅವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಆಶಾ ಜ್ಯೋತಿ ವಿಶೇಷ ಮಕ್ಕಳ ವಸತಿಯುತ ಶಾಲೆಯ ಆಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಅವರು ಎ.ಆಯ್ ಮತ್ತು ರೋಬೋಟಿಕ್ ಲ್ಯಾಬ್‌ನ್ನು ಉದ್ಘಾಟಿಸಿದರು.

 ಶಶಿಕಲಾ ಜೊಲ್ಲೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ವಿದ್ಯಾರ್ಥಿ ನಾಯಕರು ಉತ್ತಮ ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಶಿಸ್ತು, ಸಮಯಪಾಲನೆ, ಸಮರ್ಪಣೆ, ಶ್ರದ್ಧೆ, ಪ್ರಾಮಾಣಿಕತೆ, ಸತತ ಪರಿಶ್ರಮಗಳಂತಹ ಆದರ್ಶ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಯಾವಾಗಲೂ ಧನಾತ್ಮಕ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. 

Home add -Advt

ಜೊಲ್ಲೆ ಗ್ರುಪ್‌ನ ಉಪಾಧ್ಯಕ್ಷರಾದ  ಬಸವಪ್ರಸಾದ ಜೊಲ್ಲೆ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ನಾಯಕರು ಎಲ್ಲರಿಗೂ ಮಾದರಿಯಾಗಬೇಕು. ಎಲ್ಲರೂ ಐಕ್ಯತೆಯಿಂದ ಕಾರ್ಯಗಳನ್ನು ನಿಭಾಯಿಸಬೇಕು. ನಾಯಕರಾದ ತಾವು ಗುಣಾತ್ಮಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಸಂವಹನ ಕೌಶಲಗಳನ್ನು ಹೊಂದಿ ಎಲ್ಲ ವಿದ್ಯಾರ್ಥಿಗಳ ಮಧ್ಯದಲ್ಲಿ ಅಂತರ್ ಕ್ರಿಯೆಗಳನ್ನು ಹೆಚ್ಚಿಸಿ, ಎಲ್ಲರಿಗೂ ಪ್ರೇರಣೆಯನ್ನು ನೀಡುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ವಂಶ ಪಟೇಲ ಸ್ಕೂಲ್ ಹೆಡ್‌ಬಾಯ್, ಸ್ಕೂಲ್ ಹೆಡ್ ಗರ್ಲ್ ಪ್ರಗತಿ ಹೊಸಪೇಠ, ಸ್ಕೂಲ್ ಶೈಕ್ಷಣಿಕ ಹೆಡ್‌ಬಾಯ್ ಶೀನಿವಾಸ ಗುಂಡಕಲ್ಲೆ, ಸ್ಕೂಲ್ ಶೈಕ್ಷಣಿಕ ಹೆಡ್ ಗರ್ಲ್ ಆಗಿ ಸರಸ್ವತಿ ಪಾಟೀಲ ಅವರು ನೇಮಕಗೊಂಡರು. ಇವರ ಜೊತೆಗೆ ೧೬ ವಿದ್ಯಾರ್ಥಿಗಳು ಶಾಲಾ ಜವಾಬ್ದಾರಿಗಳನ್ನು ಹಂಚಿಕೊಂಡರು. 

ಒಟ್ಟು ೨೦ ವಿದ್ಯಾರ್ಥಿಗಳನ್ನೊಳಗೊಂಡ ಶಾಲಾ ಸಂಸತ್ತನ್ನು ರಚಿಸಲಾಯಿತು. ಪ್ರಾಚಾರ್ಯರಾದ ನಂದಾ ಚುನಮರಿ ಅವರು ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. 

ಕಾರ್ಯಕ್ರಮದಲ್ಲಿ ಪ್ರಿಯಾ ಜೊಲ್ಲೆ, ಡಾ. ಮಹಾದೇವ ಪಾಟೀಲ, ಡಾ.ಎ.ಪಿ ಅಕ್ಕೋಳೆ, ಡಾ.ಆರ್.ಆಯ್. ಕುರಬೆಟ್ಟ, ಸಿ.ಪಿ ಬನ್ನಟ್ಟಿ, ಉರ್ಮಿಳಾ ಚೌಗಲೆ, ಸಂದೀಪ ಮಗದುಮ, ಶಿವಾನಂದ ಪ್ರಭಾತ, ಸಿಬಂದಿ ವರ್ಗ, ಪಾಲಕರು ಹಾಗೂ ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಶಿಕ್ಷಕರಾದ ಉತ್ಕರ್ಷ ಸಮಾಜೆ ಸ್ವಾಗತಿಸಿದರು. ರೂಪಾ ದುಂಡಗಿ ವಂದಿಸಿದರು. ಗಾಯತ್ರಿ ಕಲ್ಲೋಳಿ ಹಾಗೂ ನಕುಶಾ ರಾಜಮಾನೆ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button