For Rent- Torgal
Emergency Service

ಇಬ್ಬರು ಯುವತಿಯರು ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ಜೈಭೀಮ ನಗರ ನಿವಾಸಿಯಾದ ಮನಿಷಾ ಅಶೋಕ ನಡೋಣಿ (೨೩ ವರ್ಷ) ಇವರು ಸೆ. ೮ ೨೦೨೩ ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯ ನಡುವಿನ ಅವಧಿಯಲಿ ಮನೆಯಿಂದ ಹೋದವಳು ಕಾಣಿಯಾಗಿದ್ದಾಳೆ ಎಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾಣೆಯಾದ ಯುವತಿಯ ಚಹರೆ ಪಟ್ಟ್ಟಿ:
ಎತ್ತರ ೪ ಪೂಟ ೮ ಇಂಟ್, ಸಾದಾರಣ ಮೈ ಕಟ್ಟು, ಸಾದಗಪ್ಪು ಮೈ ಬಣ್ಣ, ದುಂಡು ಮುಖ, ಕನ್ನಡ ಮರಾಠಿ ಬಾಷೆ ಬಲ್ಲವಳಾಗಿದ್ದು, ಬಿಳಿ ಬಣ್ಣದ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾಳೆ.
ಸದರಿ ಕಾಣೆಯಾದ ಯುತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಹಾರೂಗೇರಿ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಹಾರೂಗೇರಿ ಪೊಲೀಸ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಿಲ್ಲೆಯ ಅಥಣಿ ತಾಲೂಕಿನ ವಿಷ್ಣುವಾಡಿ ಗ್ರಾಮದ ನಿವಾಸಿಯಾದ ಪೂಜಾ ಸಂತ್ರಾಮ ದೊಡಮನಿ (೨೫ ವರ್ಷ) ಸೆ. ೧೩ ೨೦೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಹಾರೂಗೇರಿಯ ರಂಜನಾ ರಮೇಶ ಶೇಡಬಾಳೆ ಇವರ ಮನೆಯಿಂದ ಹಿಡಕಲ್ ಗ್ರಾಮದ ಅಕ್ಕನ ಮನೆಗೆ ಹೋಗುತ್ತೇನೆ ಎಂದು ಹೋದವಳು ಅಲ್ಲಿಯು ಹೋಗದೆ ಮನೆಗೆ ಮರಳದೆ ಕಾಣಿಯಾಗಿದ್ದಾಳೆ ಎಂದು ಹಾರೂಗೇರಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾಣೆಯಾದ ಯುವತಿಯ ಚಹರೆ ಪಟ್ಟ್ಟಿ:
ಎತ್ತರ ೫ ಪೂಟ ೪ ಇಂಟ್, ಸಾದಾರಣ ಮೈ ಕಟ್ಟು, ಗೋದಿ ಮೈ ಬಣ್ಣ, ಕೋಲು ಮುಖ, ಕನ್ನಡ ಬಾಷೆ ಬಲ್ಲವಳಾಗಿದ್ದು, ಆರೇಂಜ್ ಬಣ್ಣದ ಚೂಡಿದಾರ ಧರಿಸಿರುತ್ತಾಳೆ,
ಸದರಿ ಕಾಣೆಯಾದ ಯುತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಹಾರೂಗೇರಿ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಹಾರೂಗೇರಿ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Beereshwara 27
Bottom Ad 1
Bottom Ad 2

You cannot copy content of this page