ನೇಪಾಳದಲ್ಲಿ ಭೂ ಕಂಪನ
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೆಹಲಿ-ಎನ್ಸಿಆರ್ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮಂಗಳವಾರ ಭೂ ಕಂಪನ ಸಂಭವಿಸುವುದರೊಂದಿಗೆ, ನೇಪಾಳದಲ್ಲಿ ನಾಲ್ಕು ಬಾರಿ ಭೂಕಂಪ ಸಂಭವಿಸಿದೆ. ಸಿಕ್ಕಿಂನ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ ಹಠಾತ್ ಪ್ರವಾಹವನ್ನು ಉಂಟು ಮಾಡಿದ, ದಕ್ಷಿಣ ಲೊನಾಕ್ ಸರೋವರದ ಸ್ಫೋಟಕ್ಕೆ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪನವು ಕಾರಣವಾಗಿದೆಯೇ? ಎಂದು ವಿಜ್ಞಾನಿಗಳು ಈಗ ಅನ್ವೇಷಿಸುತ್ತಿದ್ದಾರೆ. ಇನ್ನು ಉತ್ತರ ಸಿಗಬೇಕಿದೆ.
ಸಿಕ್ಕಿಂನಲ್ಲಿ ಪ್ರವಾಹದಲ್ಲಿ ಭಾರತೀಯ ಸೇನಾ ಯೋಧರು ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. 22 ಯೋಧರು ಸೇರಿ 102 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಮೇಲಾದ ಮೇಘ ಸ್ಫೋಟದಿಂದಾಗಿ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ ಹಠಾತ್ ಪ್ರವಾಹವನ್ನು ಉಂಟುಮಾಡಿತ್ತು. ಗ್ಯಾಂಗ್ಟಾಕ್ನಿಂದ 30 ಕಿಮೀ ದೂರದಲ್ಲಿರುವ ‘ಇಂದ್ರೇನಿ’ ಎಂಬ ಉಕ್ಕಿನ ಸೇತುವೆ ತೀಸ್ತಾ ನದಿಯ ನೀರಿನಿಂದ ಸಂಪೂರ್ಣವಾಗಿ ಕೊಚ್ಚಿಹೋಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ