Belagavi NewsBelgaum NewsKannada NewsKarnataka NewsLatestNational

ಬೆಳಗಾವಿ- ದಿಲ್ಲಿ ಇಂಡಿಗೋ ವಿಮಾನ ಹಾರಾಟಕ್ಕೆ ವಿಧ್ಯುಕ್ತ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ ನೂತನವಾಗಿ ಪ್ರಾರಂಭಿಸಿರುವ ಬೆಳಗಾವಿ-ದಿಲ್ಲಿ ಮಧ್ಯೆ ವಿಮಾನ ಹಾರಾಟಕ್ಕೆ ಗುರುವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.

ಬೆಳಗಾವಿ ಏರ್ ಪೋರ್ಟ್, ಬೆಳಗಾವಿ ಕೋರ್ ಡೆವಲಪ್‌ಮೆಂಟ್ ಗ್ರೂಪ್‌ ಸಹಯೋಗದಲ್ಲಿ ಇಂಡಿಗೋ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ದೀಪ ಪ್ರಜ್ವಲಿಸಿದರು. ಸಂಸದೆ ಮಂಗಲ ಅಂಗಡಿ ಅವರು ಕೇಕ್ ಕತ್ತರಿಸಿದರು. ವಿಧಾನ ಪರಿಷತ್ ಸದಸ್ಯ, ರಾಜ್ಯ ಸರಕಾರದ ದಿಲ್ಲಿ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅಸೀಫ್ ಸೇಠ್ ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ತ್ಯಾಗರಾಜನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

180 ಸೀಟ್ ಗಳ ಏರ್‌ಬಸ್ A320 6E-2378 ವಿಮಾನ 3.58 ಕ್ಕೆ ದಿಲ್ಲಿಯಿಂದ ಹೊರಟು 116 ಪ್ರಯಾಣಿಕರೊಂದಿಗೆ 5.55 ಕ್ಕೆ ಬೆಳಗಾವಿಗೆ ಆಗಮಿಸಿತು. ಹಿಂದಿರುಗುವ ಪ್ರಯಾಣದಲ್ಲಿ ಅದೇ ವಿಮಾನ 134 ಪ್ರಯಾಣಿಕರೊಂದಿಗೆ 6.54 ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 9ಕ್ಕೆ ದಿಲ್ಲಿಗೆ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಬೆಳಗಾವಿ ಮತ್ತು ದಿಲ್ಲಿ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ಈ ವಿಮಾನ ವಾಣಿಜ್ಯೋದ್ಯಮ, ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿದೆ. ಇಂಡಿಗೋದ ಅಧಿಕೃತ ವೆಬ್‌ಸೈಟ್ www.gotndiGo.in ಮೂಲಕ ಈ ವಿಮಾನದಲ್ಲಿ ಸೀಟ್ ಗಳನ್ನು ಕಾಯ್ದಿರಿಸಬಹುದಾಗಿದೆ.

ಕನ್ನಡದಲ್ಲಿ ಉದ್ಘೋಷ:

ಇಂಡಿಗೋದ ಬೆಳಗಾವಿ ಮೂಲದ ಪೈಲಟ್ ಅಕ್ಷಯ್ ಪಾಟೀಲ್ ಅವರು 1.20 ನಿಮಿಷ ಕನ್ನಡದಲ್ಲಿ ಘೋಷಣೆ ಮಾಡುವ ಮೂಲಕ ಗಮನ ಸೆಳೆದರು ಇದೇ ವೇಳೆ ಈ ವಿಮಾನ ಸಂಪರ್ಕವನ್ನು ತರುವಲ್ಲಿ ಶ್ರಮಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಧನ್ಯವಾದ ಅರ್ಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button