ಸಾಂಕ್ರಾಮಿಕ ರೋಗಗಳ ಜಾಗೃತಿ ರ‍್ಯಾಲಿಗೆ, ಶಾಸಕ ಅನಿಲ ಬೆನಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನಗರದ ಮಹೇಶ ಪಿ.ಯು. ಕಾಲೇಜ ವತಿಯಿಂದ ಆಯೋಜಿಸಲಾದ ಸಾಂಕ್ರಾಮಿಕ ರೋಗಗಳ ಜಾಗೃತಿ ಮೂಡಿಸುವ ರ‍್ಯಾಲಿಗೆ ಶಾಸಕ ಅನಿಲ ಬೆನಕೆರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳು ಸುತ್ತಮುತ್ತಲಿನ ಪರಿಸರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ಹಾಗೂ ಸಾಂಕ್ರಾಮಿಕ ರೋಗಗಳಿಂದ ಬಾರದಂತೆ ಎಚ್ಚರವಹಿಸಬೇಕಾದ ಕ್ರಮಗಳ ಘೋಷಣೆಗಳ ಬೋರ್ಡಗಳನ್ನು ತೋರಿಸುತ್ತಾ ಆಂಜನೇಯನಗರದ ಮಹೇಶ ಪಿಯು ಕಾಲೇಜ ನಿಂದ ಮಾಳಮಾರುತಿ ಬಡಾವಣೆಯ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ವರೆಗೂ ಜಾಗೃತಿ ರ‍್ಯಾಲಿಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನಗರದ ಜನತೆಯು ಜ್ವರ ಹಾಗೂ ಇತರ ಖಾಯಿಲೆಗಳು ಬಂದರೆ ಸಮಿಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಹಾಗೂ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಬೇಕೆಂದರು.
ಈ ಜಾಗೃತಿ ರ‍್ಯಾಲಿಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ಎಮ್. ವಿ. ಭಟ್ ಪ್ರಾಂಶುಪಾಲರು ಮಹೇಶ ಪಿ.ಯು ಕಾಲೇಜ, ಎಸ್. ಎಮ್. ಪಾಟೀಲ ಅಧ್ಯಕ್ಷರು ನಾಗರಿಕ ವಿಕಾಸ ವೇದಿಕೆ, ಆನಂದ ಹೊಸುರಕರ ಪ್ರಾಚಾರ್ಯರು ಮರಾಠಾ ಮಂಡಳ ಹೋಮಿಯೋಪಥಿಕ ಕಾಲೇಜ, ಮಹೇಶ ಪಿ.ಯು ಕಾಲೇಜ ಆಡಳಿತ ಮಂಡಳಿ ಹಾಗೂ ನೂರಾರು ವಿದ್ಯಾರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ