Kannada NewsKarnataka NewsLatestPragativahini Special
ಮತ್ತೆ 21 ತಾಲೂಕು ಬರ ಪಟ್ಟಿಗೆ? : ವರದಿ ಕೇಳಿದ ಸರಕಾರ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ ಮತ್ತೆ 21 ತಾಲೂಕುಗಳ ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆ ಇದೆ.
ಈಗಾಗಲೆ 195 ತಾಲುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಕೆಲವು ತಾಲೂಕುಗಳು ಬರಪೀಡಿತವಾಗಿದ್ದರೂ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಸರಕಾರ ಇದೀಗ ಮತ್ತೆ 21 ತಾಲುಗಳನ್ನು ಗುರುತಿಸಿ ಮರು ಸಮೀಕ್ಷೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ.
ಬೆಳಗಾವಿ, ಖಾನಾಪುರ, ಸಿದ್ದಾಪುರ, ದಾಂಡೇಲಿ, ಚಾಮರಾಜ ನಗರ, ಕೃಷ್ಣರಾಜ ನಗರ, ಯಳಂದೂರು, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರು, ಅರಸಿಕೆರೆ, ಹಾಸನ, ಮೂಡಿಗೆರೆ, ತರಿಕೆರೆ, ಪೊನನ್ಂಪೇಟೆ, ಹೆಬ್ರಿ ತಾಲೂಕುಗಳ ಸಮೀಕ್ಷೇ ವರದಿ ಕೇಳಲಾಗಿದೆ.
ಈ 21 ತಾಲೂಕುಗಳನ್ನು ಶೀಘ್ರವೇ ಬರಪೀಡಿತ ಎಂದು ಸರಕಾರ ಘೋಷಿಸುವ ಸಾಧ್ಯತೆ ಇದೆ.
ಸುತ್ತೋಲೆಯ ವಿವರ ಇಲ್ಲಿದೆ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ