Kannada NewsLatest

ಇಸ್ರೇಲ್ ಮೇಲೆ ನಾಲ್ಕು ಕಡೆಗಳಿಂದ ದಾಳಿ

ಪ್ರಗತಿವಾಹಿನಿ ಸುದ್ದಿ, ಟೆಲ್ ಅವಿವಾ: ಹಮಾಸ್ ಉಗ್ರರನ್ನು ನಾಶ ಮಾಡಲು ಸಂಕಲ್ಪಿಸಿರುವ ಇಸ್ರೇಲ್‌ ನಿರ್ಧಾರದಿಂದ ಸುತ್ತಲೂ ಇರುವ ಶತ್ರು ರಾಷ್ಟ್ರಗಳು ಕೆರಳಿದ್ದು, ಇಸ್ರೇಲ್ ಮೇಲೆ 4 ಕಡೆಗಳಿಂದ ದಾಳಿಗೆ ಮುಂದಾಗಿವೆ.

ಇಸ್ರೇಲ್ ಸೇನೆ ಈ ಕುರಿತು ಮಾಹಿತಿ ನೀಡಿದೆ.  ಈಗಾಗಲೆ ಇಸ್ರೇಲ್ ಮೇಲೆ ನಾಲ್ಕೂ ದಿಕ್ಕುಗಳಿಂದ ದಾಳಿ ನಡೆಯುತ್ತಿದೆ. ಲೆಬನಾನ್ ಗಡಿಯಿಂದ ಇಸ್ರೇಲ್ ಟ್ಯಾಂಕ್ ಮೇಲೆ ದಾಳಿ ನಡೆಸಲಾಗಿದ್ದು, ಈ ದಾಳಿಗೆ ಇಸ್ರೇಲ್ ಅರ್ಟಿಲರಿ ಗನ್ ಮೂಲಕ  ಪ್ರತಿಕಾರ ಮಾಡಿದೆ.  

Home add -Advt

ಗಾಜಾ ಪಟ್ಟಿ ಸುತ್ತಮುತ್ತ ಸಿರಿಯಾದವರಿಂದ ದಾಳಿ ನಡೆಯುತ್ತಿದ್ದು ಟೆಲ್ ಅವಿವಾದಲ್ಲೂ ಗುಂಡಿನ ದಾಳಿ ಮುಂದುವರಿದಿದೆ. ಕಳೆದ ಹಮಾಸ್ ಉಗ್ರರನ್ನು ರಕ್ಷಿಸಿಕೊಳ್ಳಲು 10 ದಿನಗಳಿಂದ ಹಲವು ದೇಶಗಳು ತಮ್ಮ ಮೇಲೆ ದಾಳಿಗೆ ಮುಂದಾಗಿವೆ ಎಂದು ಇಸ್ರೇಲ್ ಸೇನೆ ಮಾಹಿತಿ ನೀಡಿದೆ.

Related Articles

Back to top button