Latest

ರಾಜಕೀಯ ನಿವೃತ್ತಿ ಘೋಷಿಸಿದ ಜಿ.ಟಿ.ದೇವೇಗೌಡ, ಕಾರಣ ಗೊತ್ತ ?

ರಾಜಕೀಯದಿಂದ ನಿವೃತ್ತಿ ಘೋಷಿಸಿದ ಜಿ.ಟಿ.ದೇವೇಗೌಡ, ಕಾರಣ ಗೊತ್ತ ?

ಪ್ರಗತಿವಾಹಿನಿ ಸುದ್ದಿ : ಜೆಡಿಎಸ್ ಮುಖ್ಯಸ್ಥ ಎಚ್‌ಡಿ ದೇವೇಗೌಡರ ಪ್ರಬಲ ಬೆಂಬಲಿಗರಾಗಿರುವ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರಿನ ಚಾಮುಂಡೇಶ್ವರಿ ಸ್ಥಾನದಿಂದ ಎರಡು ಬಾರಿ ಸೋಲಿಸಿದ ಜಿಟಿ ದೇವೇಗೌಡ ಅವರು ಇದ್ದಕ್ಕಿದ್ದಂತೆ ನಿವೃತ್ತಿಯ ಬಗ್ಗೆ ಪ್ರಕಟಣೆ ಹೊರಡಿಸಿ ಅಚ್ಚರಿ ಮೂಡಿಸಿದ್ದಾರೆ.

ಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದ ನೋಯುತ್ತಿರುವ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ದೇವೇಗೌಡ ಹೇಳಿದರು. ತನಗೆ ಇಷ್ಟವಿಲ್ಲದ ಉನ್ನತ ಶಿಕ್ಷಣ ಇಲಾಖೆಯನ್ನು ಮಂಜೂರು ಮಾಡಿರುವುದರ ಬಗ್ಗೆಯೂ ಅವರು ಹತಾಶೆ ವ್ಯಕ್ತಪಡಿಸಿದ್ದಾಗೆ ತಿಳಿಸಿದರು. ಈಗ, ಎಲ್ಲರಲ್ಲೂ ಉದ್ಭವಿಸಿರುವ ಪ್ರಶ್ನೆ ಅವರು ನಿಜಕ್ಕೂ ಜೆಡಿಎಸ್ ಹಾಗೂ ರಾಜಕೀಯ ತೊರೆದು ಹೋಗಲು ಮನಸ್ಸು ಮಾಡಿದ್ದಾರಾ? ಎಂಬುದು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಜಯಶಾಲಿಯಾಗಿ ಹೊರಬರಲು ಜೆಡಿಎಸ್ ನಿಂದ ಒಂದು ರೂಪಾಯಿ ಕೂಡ ತೆಗೆದು ಕೊಂಡವನಲ್ಲ,  “ಹಿಂದಿನ ಸರ್ಕಾರದಲ್ಲಿ ನಾನು ಆದಾಯ ಅಥವಾ ಸಹಕಾರ ಇಲಾಖೆಯನ್ನು ಬಯಸಿದ್ದೆ, ಎಂದರು.

ಆದರೆ ಸಮ್ಮಿಶ್ರ ಸರ್ಕಾರದ ಬಲವಂತದಿಂದಾಗಿ ನನಗೆ ಉನ್ನತ ಶಿಕ್ಷಣ ಇಲಾಖೆಯನ್ನು ನೀಡಿದ್ದರಿಂದ ನಾನು ಇಷ್ಟವಿಲ್ಲದಿದ್ದರೂ ನಿಭಾಯಿಸಿದೆ, ಹಾಗೂ ಅದರಿಂದ ಬಹಳಷ್ಟು ಬೇಸರಗೊಂಡಿದ್ದೇನೆ, ನಾನು ಇಲಾಖೆಯಲ್ಲಿ ಆಸಕ್ತಿ ಹೊಂದಿಲ್ಲದಿದ್ದರೂ ಅದನ್ನು ನಿಭಾಯಿಸಿದೆ, ಎಂದರು.

ಅಲ್ಲದೆ ಈಗಿನ ರಾಜಕೀಯ ಬೆಳವಣಿಗೆಯ ಬಗೆಗೆ ಮಾತನಾಡಿ, “ಈಗಿನ ರಾಜಕೀಯವನ್ನು ನಿಭಾಯಿಸುವುದು ತುಂಬಾ ಕಷ್ಟ ಎಂದು ಈಗ ನಾನು ಕಂಡುಕೊಂಡಿದ್ದೇನೆ “ಎಂದು ಅವರು ವಿವರಿಸಿದರು. ಅದನ್ನು ವಿರೋಧಿಸುವ ಅಥವಾ ಹೋರಾಡುವ ಬದಲು, ರಾಜಕೀಯವನ್ನು ತೊರೆಯುವುದು ಉತ್ತಮ ಎಂದು ಅವರು ಬಹಿರಂಗಪಡಿಸಿದರು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button