Kannada NewsLatest

ಪೊಲೀಸ್ ಠಾಣಾ ಆವರಣದಲ್ಲೇ ಕತ್ತು ಕೊಯ್ದುಕೊಂಡ ಯುವಕ

ಪೊಲೀಸ್ ಠಾಣಾ ಆವರಣದಲ್ಲೇ ಕತ್ತು ಕೊಯ್ದುಕೊಂಡ ಯುವಕ.

ಪ್ರಗತಿವಾಹಿನಿ ಸುದ್ದಿ : ಅಥಣಿ – ಕೌಟುಂಬಿಕ ಖಿನ್ನತೆಯಿಂದ ಯುವಕನೋರ್ವ ಪೊಲೀಸ್ ಠಾಣೆಯ ಅವರಣದಲ್ಲೆ ಹರಿತವಾದ ಚಾಕುವಿನಿಂದ ಕತ್ತುಕೊಯ್ದುಕೊಂಡ ಘಟನೆ ನಡೆದಿದೆ. ಅಥಣಿ ತಾಲೂಕಿನ ಅವರಖೋಡ ಗ್ರಾಮದ ಶಂಕರ್ ಮಾರುತಿ ಕಾಂಬಳೆ 25 ಆತ್ಮಹತ್ಯೆ ಯತ್ನಿಸಿದ ಯುವಕ.

ತೀವ್ರವಾಗಿ ಗಾಯಗೊಂಡ ಯುವಕನನ್ನು ಅಥಣಿ ಸರ್ಕಾರಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಶಂಕರ ಮಾರುತಿ ಕಾಂಬಳೆಯ ಸ್ಥಿತಿ ಗಂಭೀರವಾಗಿದ್ದರಿಂದ ಪ್ರಾಥಮಿಕ ಚಿಕಿತ್ಸೆ ನೀಡಿದ ಅಥಣಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ಮಹಾರಾಷ್ಟ್ರ ರಾಜ್ಯದ ಮಿರಜ್ ಆಸ್ಪತ್ರೆಗೆ ರವಾನಿಸಿದ್ದಾರೆ.

Home add -Advt

ಘಟನೆ ವಿವರ – ಸೋಮವಾರ ಮಧ್ಯಾಹ್ನ 3.30ರ ಸಮಯದಲ್ಲಿ ಅಥಣಿ ಪೊಲೀಸ್ ಠಾಣೆಯ ಆವರಣದಲ್ಲಿ ಬಂದ ಯುವಕ ತನ್ನ ಕೈ ಚೀಲದಲ್ಲಿ ಇದ್ದ ಚಾಕುವನ್ನು ತೆಗೆದುಕೊಂಡು ತನ್ನ ಕುತ್ತಿಗೆಗೆ 4 ರಿಂದ 5 ಬಾರಿ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಇದನ್ನು ಗಮನಿಸಿದ ಅಥಣಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಕೂಡಲೆ ಆತನ ಕೈಯಿಂದ ಚಾಕುವನ್ನು ಕಸಿದುಕೊಂಡು ಆತನನ್ನು ಸರಕಾರಿ ಆಸ್ಪತ್ರಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.

ಆದರೆ ಶಂಕರ ಮಾರುತಿ ಕಾಂಬಳೆ ಯಾವ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿಯೇ ಬಂದು ಕತ್ತು ಕೊಯ್ದು ಕೊಂಡಿದ್ದ ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲಾ. ಅಥಣಿ ಡಿ ಎಸ್ ಪಿ, ರಾಮಣ್ಣ ಬಸರಗಿ, ಪಿ ಎಸ್ ಐ, ಯು ಎಸ್ ಅವಟಿ, ಆಸ್ಪತ್ರಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೌಟುಂಬಿಕ ಕಲಹ, ದಾಯಾದಿಗಳ ಕಲಹ, ಅಥವಾ ಮಾನಸಿಕ ಖಿನ್ನತೆಗೆ ಒಳಗಾಗಿ ಶಂಕರ ಆತ್ಮಹತ್ಯೆ ಯತ್ಮ ಮಾಡಿಕೊಳ್ಳಲು ಯತ್ನ ನಡೆಸಿದ್ದಾನೆ ಎನ್ನುವುದರ ಕುರಿತು ತನಿಖೆ ಕೈಗೊಂಡಿದ್ದಾರೆ

ಘಟನೆ ಕುರಿತು ಅಥಣಿ ಫೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.////

Related Articles

Back to top button