Belagavi NewsBelgaum NewsKannada NewsKarnataka NewsLatestPolitics

*ಬೆಳಗಾವಿ ಸದನದಲ್ಲಿ ಬಾರ್‌ಲೈಸನ್ಸ್ ಕುರಿತು ಕಾವೇರಿದ ಚರ್ಚೆ*

ಸಿಎಲ್-7 ಸನ್ನದು ನೀಡಿಕೆ; ಲಾಡ್ಜಿಂಗ್ ವಿನ್ಯಾಸ,ಪಾರ್ಕಿಂಗ್ ಅಂಶ ಸೇರ್ಪಡೆಗೆ ಕ್ರಮ: ಸಚಿವ ತಿಮ್ಮಾಪುರ


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ ಸುವರ್ಣಸೌಧ: ಸದದಲ್ಲಿ ಬಾರ್‌ಲೈಸೆನ್ಸ್ ನೀಡಿಕೆ ಸಂಬಂಧಿಸಿದಂತೆ ಕಾವೇರಿದ ಚರ್ಚೆ ಮಂಗಳವಾರ ವಿಧಾನನಸಭೆಯಲ್ಲಿ ನಡೆಯಿತು. ಸಿಎಲ್-7 ಸನ್ನದುಗಳ ನೀಡಿಕೆಯಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ, ಮನಸ್ಸಿಗೆ ಬಂದಂತೆ ನೀಡಲಾಗುತ್ತಿದೆ ಎಂಬ ಸದಸ್ಯರ ಆರೋಪಗಳಿಗೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ನಿಯಮಗಳ ಅನುಸಾರವೇ ಸಿಎಲ್-7 ಬಾರ್ ಲೈಸೆನ್ಸ್ಗಳ ನೀಡಲಾಗಿದೆ. ಸಿಎಲ್-7 ಸನ್ನದುಗಳ ನೀಡಿಕೆಯ ಈಗಿರುವ ನಿಯಮಗಳಲ್ಲಿ ಲಾಡ್ಜಿಂಗ್ ವಿನ್ಯಾಸ ಎಷ್ಟಿರಬೇಕು ಮತ್ತು ಪಾರ್ಕಿಂಗ್ ಹೇಗಿರಬೇಕು ಎಂಬುದರ ಬಗ್ಗೆ ಯಾವುದೇ ಅಂಶಗಳಿಲ್ಲ.ಅದನ್ನು ಮುಂದಿನ ದಿನಗಳಲ್ಲಿ ಸೇರ್ಪಡೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

Home add -Advt


ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಬಾರ್‌ಲೈಸೆನ್ಸ್ಗಳ ನೀಡಿಕೆಯಲ್ಲಿ ಮೀಸಲಾತಿ ಅನುಷ್ಠಾನ ವಿಚಾರ ಸರಕಾರದ ಗಮನದಲ್ಲಿದ್ದು,ಕಾನೂನು ತಂದು ಅನುಷ್ಠಾನಗೊಳಿಸುವುದಕ್ಕೆ ಕ್ರಮವಹಿಸಲಾಗುವುದು ಎಂದರು.
ಕೋಲಾರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 56 ಸಿಎಲ್-7 ಸನ್ನದುಗಳನ್ನು ಮಂಜೂರು ಮಾಡಲಾಗಿದೆ. ಕೋಲಾರ ಜಿಲ್ಲೆಯ ಅಬಕಾರಿ ಅಧೀಕ್ಷಕ ರಂಗಪ್ಪ ಅವರ ಮೇಲಿನ ಆರೋಪಗಳ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ವರದಿ ತರಿಸಿಕೊಳ್ಳಲಾಗುವುದು;ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

Related Articles

Back to top button