Kannada NewsKarnataka NewsLatest

*ದತ್ತು ಪುತ್ರಿ ನಾಪತ್ತೆ; ಆತ್ಮಹತ್ಯೆಗೆ ಶರಣಾದ ಜನಪ್ರಿಯ ಕಲಾವಿದ ದಂಪತಿ*

ಪ್ರಗತಿವಾಹಿನಿ ಸುದ್ದಿ; ಉಡುಪಿ: ದತ್ತು ಪುತ್ರಿ ನಾಪತ್ತೆಯಾದ ಕೆಲವೇ ಹೊತ್ತಲ್ಲಿ ಖ್ಯಾತ ಕಲಾವಿದ ದಂಪತಿ, ಸಮಾಜಸೇವಕರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.

ಕಾಪು ತಾಲೂಕಿನ ಮಜೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಲೀಲಾಧರ ಶೆಟ್ಟಿ (68) ಹಾಗೂ ಪತ್ನಿ ವಸುಂಧರಾ ಶೆಟ್ಟಿ (59) ಆತ್ಮಹತ್ಯೆ ಮಾಡಿಕೊಂಡವರು. ಲೀಲಾಧರ ಶೆಟ್ಟಿ ದಂಪತಿ ರಂಗಭೂಮಿ ಕಲಾವಿದರು. ರಂಗ ತರಂಗ ನಾಟಕ ಸಂಸ್ಥೆಯ ಸಂಸ್ಥಾಪಕರು. ಲೀಲಾಧರ್ ಅವರು ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿ ಕಾರ್ಯನಿರ್ವಹಿಸಿದ್ದರು. ಕಾಪು ವಿಧನಸಭಾ ಕ್ಷೇತ್ರದಿಂದ ಚುನವಣೆಗೂ ಸ್ಪರ್ಧಿಸಿದ್ದರು. ರಂಗ ತರಂಗ ಹೆಸರಾಂತ ನಾಟಕ ತಂಡ ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಲೀಲಾಧರ ಶೆಟ್ಟಿ ಹಾಗೂ ವಸುಂಧರಾ ಶೆಟ್ಟಿ ದಂಪತಿ 16 ವರ್ಷಗಳ ಹಿಂದೆ ಬಾಲಕಿಯನ್ನು ದತ್ತು ಪಡೆದಿದ್ದರು. ಕಾಪು ನಿವಾಸದಿಂದ ಎರಡು ದಿನಗಳ ಹಿಂದೆ ದತ್ತು ಮಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಇದರಿಂದ ಮನನೊಂದಿದ್ದ ದಂಪತಿ ಈಗ ಮನೆಯಲ್ಲಿಯೇ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಕಾಪು ಪೊಲಿಸರು ಭೇಟಿ ನೀಡಿ ಪರಿಶೀಲನೆ ನದೆಸಿದ್ದಾರೆ. ಮತ್ತೊಂದೆಡೆ ಮೃತ ದಂಪತಿ ದತ್ತು ಮಗಳು ಕಾಣೆಯಾಗಿರುವ ಬಗ್ಗೆ ಅಪಹರಣ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button