ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಂಸತ್ ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಸಿಬ್ಬಂದಿಗಳನ್ನು ಲೋಕಸಭಾ ಕಾರ್ಯಾಲಯ ಅಮಾನತು ಮಾಡಿದೆ.
ಬುಧವಾರ ಸಂಸತ್ ನಲ್ಲಿ ಭದ್ರತಾ ಲೋಪ ಪ್ರಕರಣ ನಡೆದಿದ್ದು, ಲೋಕಸಭಾ ಕಲಾಪದ ವೆಳೆ ಇಬ್ಬರು ದುಶ್ಕರ್ಮಿಗಳು ವೀಕ್ಷಕರ ಗ್ಯಾಲರಿಯಿಮ್ದ ಜಿಗಿದು ಅಶ್ರುವಾಯು ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಸಭೆ ಸಕ್ರೆಟರಿಯೇಟ್ ಮಹತ್ವದ ಕ್ರಮ ಕೈಗೊಂಡಿದ್ದು, 8 ಸಿಬ್ಬಂದಿಅಗ್ಳನ್ನು ಅಮಾನತುಗೊಳಿಸಿದೆ.
ಇನ್ನು ಭದ್ರತಾ ಲೋಪ ಪ್ರಕರಣದಲ್ಲಿ ಸಾಗರ್ ಶರ್ಮಾ, ಮನೋರಂಜನ್, ನೀಲಂ ಸೇರಿದಂತೆ ಐವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ 120 ಬಿ, 452 , 153, 186 ಅಡಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ