Kannada NewsKarnataka NewsLatest

ಸಂತ್ರಸ್ತರ ನೆರವಿಗೆ ಟೊಂಕಕಟ್ಟಿ ನಿಂತ ಲಕ್ಷ್ಮಿ ಹೆಬ್ಬಾಳಕರ್

ಸಂತ್ರಸ್ತರ ನೆರವಿಗೆ ಟೊಂಕಕಟ್ಟಿ ನಿಂತ ಲಕ್ಷ್ಮಿ ಹೆಬ್ಬಾಳಕರ್

ಕಬಲಾಪುರದಲ್ಲಿ ದಂಪತಿ ರಕ್ಷಿಸಿದ ಸಾರ್ಥಕ ಕ್ಷಣದಲ್ಲಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಇಡೀ ಜಿಲ್ಲೆ ತತ್ತರಿಸಿ ಹೋಗಿದೆ. ಇದಕ್ಕೆ ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರವೂ ಹೊರತಾಗಿಲ್ಲ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಗಲು, ರಾತ್ರಿ ಎನ್ನದೆ ನಿದ್ದೆ ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಕಬಲಾಪುರದಲ್ಲಿ ನಡುಗಡ್ಡೆಯಲ್ಲಿ ಸಿಲುಕಿದ್ದ ದಂಪತಿ ರಕ್ಷಣೆಗೆ 2 ದಿನ ಸ್ಥಳದಲ್ಲೇ ಬೀಡುಬಿಟ್ಟು ಯಶಸ್ವಿಯಾದ ಹೆಬ್ಬಾಳಕರ್, ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸುವವರೆಗೆ ವಿರಮಿಸಲಿಲ್ಲ.

ಇದಾದ ನಂತರ, ಕ್ಷೇತ್ರದ ಪ್ರತಿ ಹಳ್ಳಿಗೆ ತೆರಳುತ್ತಿರುವ ಅವರು, ಮನೆಗಳನ್ನು ಕಳೆದುಕೊಂಡವರನ್ನು ಸಂತೈಸುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, ಸರಕಾರಕ್ಕೆ ಸಲ್ಲಿಸಲು ಸಂಪೂರ್ಣ ವರದಿ ಸಿದ್ಧಪಡಿಸುತ್ತಿದ್ದಾರೆ. ತೀವ್ರ ಸಂಕಷ್ಟದಲ್ಲಿರುವವರಿಗೆ ತಮ್ಮದೇ ರೀತಿಯಲ್ಲಿ ನೆರವು ನೀಡುತ್ತಿರುವ ಶಾಸಕಿ ಹೆಬ್ಬಾಳಕರ್, ತಮ್ಮ ಕಾರ್ಯಕರ್ತರನ್ನೂ ಸಹ ಸಂತ್ರಸ್ತರ ನೆರವಿನ ಕೆಲಸದಲ್ಲಿ ತೊಡಗಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ರಸ್ತಗಳು ಹಾಳಾಗಿದ್ದು, ಅವುಗಳನ್ನು ಖುದ್ದು ವೀಕ್ಷಿಸಿ ನಷ್ಟದ ಅಂದಾಜು ಸಿದ್ದಪಡಿಸಿ ತುರ್ತು ದುರಸ್ತಿಗೆ ಅಧಿಕಾರಿಗಳಇಗೆ ಸೂಚನೆ ನೀಡುತ್ತಿದ್ದಾರೆ. ಸಾಂಬ್ರಾ, ಮುತ್ನಾಳ, ಸುಳಗೆ, ಚಂದನ ಹೊಸೂರ್, ಹಲಗಿಮರ್ಡಿ, ಸಂತಿಬಸ್ತವಾಡ, ಹಿರೇಬಾಗೇವಾಡಿ ಮೊದಲಾದ ಹಳ್ಳಿಗಳನ್ನು ಈಗಾಗಲೆ ಸುತ್ತು ಹಾಕಿರುವ ಲಕ್ಷ್ಮಿ ಹೆಬ್ಬಾಳಕರ್, ಇನ್ನೊಂದು ವಾರದಲ್ಲಿ ಕ್ಷೇತ್ರದ ಎಲ್ಲ ಹಳ್ಳಿಗೂ ಭೇಟಿ ನೀಡಿ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವುದಾಗಿ ಹೇಳಿದ್ದಾರೆ.

 ಸಂಕಷ್ಟಕ್ಕೆ ನೆರವು

ಬೆಳಗಾವಿಯ ಚಂದನಹೊಸೂರ ಗ್ರಾಮಕ್ಕೆ ಭೇಟಿ ನೀಡಿದ್ದ ಲಕ್ಷ್ಮೀ  ಹೆಬ್ಬಾಳಕರ್ ಅಲ್ಲಿನ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿದರು.  ಗ್ರಾಮದ ಮಹಿಳೆಯ30 ವರ್ಷದ ಅಳಿಯ ತೀರಿಕೊಂಡಿದ್ದು, ತನ್ನ 25 ವರ್ಷದ ಮಗಳು, ಮೊಮ್ಮಕ್ಕಳೊಂದಿಗೆ ಆಕೆ ಜೀವನ ನಡೆಸುತ್ತಿದ್ದಾರೆ. ಪ್ರಕೃತಿ ವಿಕೋಪಕ್ಕೆ ಇರುವ ಮನೆಯನ್ನೂ ಕಳೆದುಕೊಂಡಿದ್ದಾರೆ. ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಜೊತೆಗೆ ಆಕೆಯ ಸಂಕಷ್ಟಕ್ಕೆ ನೆರವಾಗುವ ಭರವಸೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button