Kannada NewsLatest

*ಮಾಜಿ ಶಾಸಕ ಕೃಷ್ಣ ಹೆಗಡೆ ಸೇರಿ ಹಲವರಿಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ, ಮುಂಬೈ: ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಮುಂಬೈ ಮಾಜಿ ಶಾಸಕ ಕೃಷ್ಣ ಹೆಗಡೆ ಅವರನ್ನು ರಾಜ್ಯಪಾಲ ರಮೇಶ್ ಬೈಸ್ ಅವರು ಶನಿವಾರ ಸಂಜೆ ರಾಜಭವನದಲ್ಲಿ ಸನ್ಮಾನಿಸಿದರು.

ಕಾರ್ಯಕ್ರಮವನ್ನು ಸಪ್ನಾ ಸುಬೋಧ ಸಾಯೋಜಿ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿತ್ತು. ಪತ್ರಿಕೋದ್ಯಮ, ಚಲನಚಿತ್ರ, ಸಂಗೀತ ಮತ್ತು ಸಂಸ್ಕೃತಿ, ವೈದ್ಯಕೀಯ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಸುಬೋಧ್ ಸಾವೋಜಿ (ಮಾಜಿ ಮಂತ್ರಿ) ಮತ್ತು ಡಾ ರಾಹುಲ್ ಸಾವೋಜಿ ಆಯೋಜಿಸಿದ್ದರು. ಸನ್ಮಾನ ಸ್ವೀಕರಿಸಿದವರಲ್ಲಿ ಭಜನ್ ನಿರೂಪಕ ಅನುಪ್ ಜಲೋಟ, ನಟ ಸಚಿನ್ ಪಿಲ್ಗಾಂವ್ಕರ್, ಆರೋಗ್ಯ ತಜ್ಞ ಡಾ. ಮುಖೇಶ್ ಬಾತ್ರಾ, ತರುಣ್ ಭಾರತ್ ಸಂಪಾದಕ ಗಜಾನನ್ ನಿಮ್‌ದೇವ್ ಮತ್ತು ಎನ್‌ಸಿಪಿ ಮುಖ್ಯ ವಕ್ತಾರ ಮಹೇಶ್ ತಾಪಸೆ ಸೇರಿದ್ದಾರೆ.

Home add -Advt

Related Articles

Back to top button