Belagavi NewsBelgaum News

*ಕು. ಅಂತರಾ ಕುಲಕರ್ಣಿಗೆ ಸನ್ಮಾನ ಮತ್ತು ಸಂಗೀತ ಸಂಜೆ*


ಪ್ರಗತಿವಾಹಿನಿ ಸುದ್ದಿ,ಬೆಳಗಾವಿ – ಬೆಳಗಾವಿಯ ಫ್ಯಾನ್ ಕ್ಲಬ್ ಆಫ್ ಓಲ್ಡ ಸಾಂಗ್ಸದವರು ಇದೇ ದಿ. ೨೧ ರವಿವಾರದಂದು ಸಾ. ೫-೩೦ ಕ್ಕೆ ಹಿಂದವಾಡಿಯಲ್ಲಿರುವ ಐ.ಎಂ.ಇ.ಆರ್. ಸಭಾಭವನದಲ್ಲಿ ಸೂರ ನವಾ ಧ್ಯಾಸ ನವಾ ಮರಾಠಿ ರಿಯಾಲಿಟಿ ಸಂಗೀತ ಶೋ ದಲ್ಲಿ ಎರಡನೇ ಸ್ಥಾನ ಪಡೆದಿರುವ ಯುವ ಕಲಾವಿದೆ ಕು. ಅಂತರಾ ಕುಲಕರ್ಣಿ ಇವರಿಗೆ ಗೌರವ ಸನ್ಮಾನವನ್ನು ಹಮ್ಮಿಕೊಂಡಿದ್ದಾರೆ. ಹಿರಿಯ ನ್ಯಾಯವಾದಿ ಎಸ್ ಎಂ. ಕುಲಕರ್ಣಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಕು. ಅಂತರಾ ಕುಲಕರ್ಣಿ ಅಲ್ಲದೇ ಯುವ ಕಲಾವಿದರಾದ ಪೂರ್ವಿ, ಶ್ರೇಯಾ, ಸೃಷ್ಠಿ, ಪಾವನಿ ಇವರಿಂದ ಚಿತ್ರಗೀತೆಗಳ ಸಂಗೀತ ಸಂಜೆ ನಡೆಯಿಸಿಕೊಡಲಿದ್ದಾರೆ. ಪ್ರವೇಶ ಉಚಿತವಾಗಿದ್ದು ಸಂಗೀತಾಸಕ್ತರು ಇದರ ಉಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.


ಅಂತರಾ ಕುಲಕರ್ಣಿ ಪರಿಚಯ: ಗೋಗಟೆ ಪಿ.ಯು.ಕಾಲೇಜ ಆಫ್ ಕಾಮರ್ಸ ಕಾಲೇಜದಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿರುವ ಅಂತರಾ ಕುಲಕರ್ಣಿ ಕಲರ್ಸ ಮರಾಠಿ ಟಿ.ವಿ. ಚೆನಲ್ ದಲ್ಲಿ ಬರುವ ಸೂರ ನವಾ ಧ್ಯಾಸ ನವಾ ಎಂಬ ಮರಾಠಿ ರಿಯಾಲಟಿ ಸಂಗೀತ ಷೋದಲ್ಲಿ ಎರಡನೆಯ ಸ್ಥಾನ ಪಡೆದಿದ್ದಾಳೆ. ರಫೀಕ ಶೇಖ ಇವರಿಂದ ಧ್ವನಿ ತರಬೇತಿ ಪಡೆದಿರುವ ಕು. ಅಂತರಾ ಕುಲಕರ್ಣಿ ಸಧ್ಯ ಕೊಲ್ಲಾಪುರದ ಶ್ರೀಮತಿ ಸ್ನೇಹಾ ರಾಜೂರಕರ ಇವರಿಂದ ಸಂಗೀತ ತರಬೇತಿ ಪಡೆಯುತ್ತಿದ್ದಾಳೆ. ಕಲರ್ಸ ಕನ್ನಡ ಮತ್ತು ಝೀ ಟಿವಿ ಹಿಂದಿ ರಿಯಾಲಟೀ ಷೋಗಳಲ್ಲಿ ಸಹ ಭಾಗವಹಿಸಿದ್ದಾಳೆ. ಈ ಷೋದಲ್ಲಿ ಮಾಧುರಿ ದಕ್ಷೀತ ,ಸುರೇಶ ವಾಡಕರ,ಸಾದನಾ ಸರಗಮ, ನಾನಾ ಪಾಟೇಕರ, ಭರತ ಜಾಧವ,ಅಶೋಕ ಸರಾಫ, ನಿವೇದಿತಾ ಸರಾಫ, ಸೋನಾಲಿ ಕುಲಕರ್ಣಿ, ವೈಶಾಲಿ ಸಾಮಂತ ಮುಂತಾದವರೆದುರಲ್ಲಿ ಕಾರ್ಯಕ್ರಮ ನೀಡಿದ ಶ್ರೇಯಸ್ಸು ಇವಳದ್ದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button