ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಿಗೆ
ನಿಖಿಲ್ ಕುಮಾರಸ್ವಾಮಿ ಭೇಟಿ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆ. 12ರಂದು ಸೋಮವಾರ ಬೆಳಗಿನ ಜಾವ ಬೆಂಗಳೂರಿನಿಂದ ಹೊರಟು ಹುಬ್ಬಳ್ಳಿಗೆ ಆಗಮಿಸುವರು.
ವಿಧಾನ ಪರಿಷತ್ನ ಜೆ.ಡಿ.ಎಸ್ ಪಕ್ಷದ ನಾಯಕರಾದ ಬಸವರಾಜ ಎಸ್ ಹೊರಟ್ಟಿ ಹಾಗೂ ಜೆ,ಡಿ,ಎಸ್ ಹಿರಿಯ ರಾಜ್ಯ ಉಪಾಧ್ಯಕ್ಷ ಹಾಗೂ ನವಲಗುಂದ ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ, ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಹಾಗೂ ಶರಣಗೌಡ ಪಾಟೀಲ, ಅವರೊಂದಿಗೆ ಬೆಳಗ್ಗೆ 11 ಗಂಟೆಗೆ ಅತಿವೃಷ್ಟಿಯಿಂದ ಹಾನಿಗೊಳಗಾದ ಹುಬ್ಬಳ್ಳಿ ತಾಲೂಕಿನ ಪ್ರದೇಶಗಳಿಗೆ ಭೇಟಿ ನೀಡುವರು. ಅಲ್ಲಿಂದ ಧಾರವಾಡಕ್ಕೆ ಭೇಟಿ ನೀಡುವರು.
ಆನಂತರ ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರ, ದಾಸ್ತಿಕೊಪ್ಪ, ಎಂ.ಕೆ. ಹುಬ್ಬಳ್ಳಿ ಗ್ರಾಮಗಳ ಹಾನಿಯನ್ನು ವೀಕ್ಷಿಸುವರು.
ಸಂಜೆ 4 ಗಂಟೆಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಭವಿಸಿರುವ ಹಾನಿಯನ್ನು ವೀಕ್ಷಿಸಿ, ಅಲ್ಲಿಂದ ಸಂಜೆ 6 ಗಂಟೆಗೆ ಗೋಕಾಕ್ ಪಟ್ಟಣದಲ್ಲಿ ಉಂಟಾಗಿರುವ ಹಾನಿಯನ್ನು ವೀಕ್ಷಿಸುವರು. ರಾತ್ರಿ 8 ಗಂಟೆಗೆ ಬೈಲಹೊಂಗಲದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಚರ್ಚಿಸುವರು. ಸಂತ್ರಸ್ತ್ರರ ಮನೆಯಲ್ಲಿಯೇ ವಾಸ್ತವ್ಯ ಮಾಡಿ, ಅವರಿಗೆ ಧೈರ್ಯ ತುಂಬುವ ಜೊತೆಗೆ ಸದ್ಯದ ಸ್ಥಿತಿಗತಿ, ನೋವುಗಳನ್ನು ಅರಿತುಕೊಳ್ಳುವರು.
ಆ. 13ರಂದು ಮಂಗಳವಾರ ಬೆಳಗ್ಗೆ ಬೈಲಹೊಂಗಲದಿಂದ ಹೊರಟು ಯರಗಟ್ಟಿ ಹಾಗೂ ರಾಮದುರ್ಗ ಪಟ್ಟಣದ ಸ್ಥಿತಿಗತಿಯನ್ನು ಅವಲೋಕಿಸುವರು.
ಆನಂತರ ಅಲ್ಲಿಂದ ಮಧ್ಯಾಹ್ನ 12ಗಂಟೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ,ಹುನಗುಂದ, ಕೂಡಲಸಂಗಮ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸುವರು. ಅವರ ಬೆಳಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಸಂಗ್ರಹಿಸುವರು.
ಆನಂತರ ಅಲ್ಲಿಂದ ಸಂಜೆ 5 ಗಂಟೆಗೆ ಕೃಷ್ಣಾನದಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಯಾದಗಿರಿ ಜಿಲ್ಲೆಯ ಹಾನಿಗೋಳಗಾದ ಪ್ರದೇಶಗಳಿಗೆ ಭೇಟಿ ನೀಡುವರು. ರಾತ್ರಿ ಯಾದಗಿರಿಯಿಂದ ಬೆಂಗಳೂರಿಗೆ ತೆರಳುವರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ