Kannada NewsKarnataka NewsLatest

*ಟ್ಯೂಷನ್ ಗೆ ಹೋಗಿದ್ದ ಬಾಲಕ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಟ್ಯೂಷನ್ ಗೆ ಹೋಗಿದ್ದ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ದ್ ನಲ್ಲಿ ನಡೆದಿದೆ.

ಪರಿನವ್ ನಾಪತ್ತೆಯಾಗಿರುವ 12 ವರ್ಷದ ಬಾಲಕ. ನಿವೇದಿತಾ ಹಾಗೂ ಸುಖೇಶ್ ದಂಪತಿಯ ಪುತ್ರ. ಗಂಜೂರಿನ ಡೆನ್ ಅಕಾಡೆಮಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ.

ವೈಟ್ ಫೀಲ್ಡ್ ನ ಅಲೆನ್ ಟ್ಯೂಷನ್ ಸೆಂಟರ್ ಗೆ ತಂದೆ ಭಾನುವಾರ ಡ್ರಾಪ್ ಮಾಡಿದ್ದರು. ಬಾಲಕನನ್ನು ಮಧ್ಯಾಹ್ನ ಕರೆತರಲು ಹೋಗಲು ಸ್ವಲ್ಪ ತಡವಾಗಿದೆ. ಅಷ್ಟರಲ್ಲಿ ನಾಪತ್ತೆಯಾಗಿದ್ದಾನೆ.

ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರತ್ತಹಳ್ಳಿವರೆಗೆ ನಡೆದು ಬಂದಿರುವ ಬಾಲಕ ಬಳಿಕ ಬಿಎಂಟಿಸಿ ಬಸ್ ಹತ್ತಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ಬಳಿಕ ಬಾಲಕ ಎಲ್ಲಿ ಹೋಗಿದ್ದಾನೆ ಎಂಬುದು ತಿಳಿಯುತ್ತಿಲ್ಲ. ಭಾನುವಾರ ನಾಪತ್ತೆಯಾಗಿರುವ ಬಾಲಕನ ಸುಳಿವು ಈವರೆಗೂ ಸಿಕ್ಕಿಲ್ಲ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button