Kannada NewsKarnataka News

ಹೆಸ್ಕಾಂ ಸಿಬ್ಬಂದಿ ಅವಿಶ್ರಾಂತ ದುಡಿಮೆ

ಹೆಸ್ಕಾಂ ಸಿಬ್ಬಂದಿ ಅವಿಶ್ರಾಂತ ದುಡಿಮೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಇತ್ತೀಚಿನ ಪ್ರವಾಹದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು, ಸರಕಾರದ ವಿವಿಧ ಇಲಾಖೆಗಳು ಎಲ್ಲರೂ ಒಟ್ಟಾಗಿ, ನಿರಂತರ ಕೆಲಸ ಮಾಡಿದ್ದರಿಂದ ಬೆಳಗಾವಿ ದೊಡ್ಡ ಅಪಾಯದಿಂದ ಉಳಿಯುವಂತಾಗಿದೆ.

ಇಡೀ ಬೆಳಗಾವಿ ಮುಳುಗಿದ್ದರೂ ಹೆಸ್ಕಾಂ ಸಿಬ್ಬಂದಿ ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ಹಾಗಾಗಿ ನಗರ ವಿದ್ಯುತ್ ಸಮಸ್ಯೆಯಿಂದ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಳಲಲಿಲ್ಲ. ಹೆಸ್ಕಾಂ ಬೆಳಗಾವಿ ನಗರ ಉಪವಿಭಾಗ 1 ಮತ್ತು 2ರ ಚಟುವಟಿಕೆ ಮತ್ತು ದೂರುಗಳ ಕುರಿತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅರವಿಂದ ಗದಗಕರ್ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ.

ಪ್ರವಾಹದ ವೇಳೆ 16 ಟ್ರಾನ್ಸ್ಫಾರ್ಮರ್ ವಿಫಲವಾಗಿದ್ದವು. ಸುಮಾರು 25 ಕಂಬಗಳು ಬಿದ್ದಿದ್ದವು. 3 ಸಾವಿರದಷ್ಟು ದೂರುಗಳು ದಾಖಲಾಗಿದ್ದವು. ಅತ್ಯಂತ ಅಪಾಯಕಾರಿ ಪರಿಸ್ಥಿತಿಗಳನ್ನೆದುರಿಸಿಯೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಎಲ್ಲ ಸಿಬ್ಬಂದಿ ಹಗಲು, ರಾತ್ರಿ ಯುದ್ದೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಶ್ರಮದಿಂದ ನಾವು ಇಂತಹ ಕಠಿಣ ಸಂದರ್ಭವನ್ನೂ ಯಶಸ್ವಿಯಾಗಿ ಎದುರಿಸಲು ಸಾಧ್ಯವಾಯಿತು

-ಅರವಿಂದ ಗದಗಕರ್,

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button