Kannada NewsKarnataka NewsLatest

*ಓದು ಎಂದು ಬುದ್ಧಿ ಹೇಳಿದ್ದಕ್ಕೆ ಮನೆ ಬಿಟ್ಟು ಹೋದ 13 ವರ್ಷದ ಬಾಲಕ; ಪೋಷಕರು ಕಂಗಾಲು*

ಪ್ರಗತಿವಾಹಿನಿ ಸುದ್ದಿ: ಚನ್ನಾಗಿ ಓದು ಎಂದು ಬುದ್ಧಿ ಹೇಳಿದ್ದಕ್ಕೆ 13 ವರ್ಷದ ಬಾಲಕ ಮನೆ ಬಿಟ್ಟು ಹೋಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ದಾವಣಗೆರೆಯ ಎಸ್ ಎಸ್ ಲೇಔಟ್ ನಿವಾಸಿ ಸಾತ್ವಿಕ್ ಮನೆಬಿಟ್ಟು ಹೋಗಿರುವ 13 ವರ್ಷದ ಬಾಳಕ. ಹನುಮಂತ-ಗಂಗಮ್ಮ ದಂಪತಿ ಪುತ್ರ.

Home add -Advt

ಫೆ.6ರಂದು ಮನೆ ಬಿಟ್ಟು ಹೋಗಿರುವ ಬಾಲಕ ಇನ್ನೂ ವಾಪಾಸ್ ಆಗಿಲ್ಲ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಬಾಲಕ ದಾವಣಗೆರೆ ರೈಲು ನಿಲ್ದಾಣದಲ್ಲಿ ಟಿಕೆಟ್ ಪಡೆದು ಹುಬ್ಬಳ್ಳಿ ಕಡೆ ತೆರಳುವ ರೈಲು ಹತ್ತಿರುವುದು ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಹಿನ್ನೆಲೆಯಲ್ಲಿ ಸಾತ್ವಿಕ್ ತಂದೆ ಹುಬ್ಬಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನೊಂದೆಡೆ ಬಾಲಕನಿಗಾಗಿ ಪೊಲೀಸರು ಹುಡುಕಾಡಿದ್ದಾರೆ.

ಮಗನಿಗೆ ಚನ್ನಾಗಿ ಓದು ಎಂದು ಬುದ್ಧಿ ಹೇಳಿದ್ದಕ್ಕೆ ಮನ ನೊಂದ ಬಾಲಕ ಮನೆ ಬಿಟ್ಟು ಹೋಗಿದ್ದು, ಪೋಷಕರು ಕಂಗಾಲಾಗಿದ್ದಾರೆ.


Related Articles

Back to top button