*ಜನವಿಕಾಸಕ್ಕಾಗಿ, ಜನಕಲ್ಯಾಣಕ್ಕಾಗಿ ಜಗನ್ನಾಥ ರಾವ್ ಜೋಶಿ ಭವನ ಸಮಾಜಕ್ಕೆ ಅರ್ಪಣೆ: ದತ್ತಾತ್ರೇಯ ಹೊಸಬಾಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಮ್ಮ ಜೀವನವನ್ನೇ ಸಮಾಜಕ್ಕಾಗಿ ಅರ್ಪಿಸಿದ ಜಗನ್ನಾಥ ರಾವ್ ಜೋಶಿ ಅವರ ಸ್ಮರಣಾರ್ಥ ನಿರ್ಮಿಸಿರುವ ಜಗನ್ನಾಥ ರಾವ್ ಜೋಶಿ ಸ್ಮಾರಕ ಭವನ ಇಡೀ ಸಮಾಜಕ್ಕೆ ಅರ್ಪಣೆಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಬೆಳಗಾವಿಯ ಸಂಘ ಸದನದಲ್ಲಿ ಭಾನುವಾರ ಜಗನ್ನಾಥ ರಾವ್ ಜೋಶಿ ಸ್ಮಾರಕ ಭವನ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.
ಜನವಿಕಾಸಕ್ಕಾಗಿ, ಜನಕಲ್ಯಾಣಕ್ಕಾಗಿ ಈ ಭವನ ನಿರ್ಮಾಣ ಮಾಡಲಾಗಿದೆ. ಇಲ್ಲಿ ಬಳಸಿರುವ ಒಂದೊಂದು ಪೈಸೆಯೂ ಸದುಪಯೋಗವಾಗಬೇಕು. ಒಂದೊಂದು ಇಂಚು ಜಾಗವೂ ಸದ್ಭಳಕೆಯಾಗಬೇಕು. ಜಗನ್ನಾಥ ರಾವ್ ಅವರು ಜಾತಿ, ಮತ, ಧರ್ಮಗಳನ್ನು ಮೀರಿದವರಾಗಿದ್ದರು. ದೇಶಸೇವೆಯೇ ಪರಮೋಚ್ಚ ಗುರಿಯಾಗಿತ್ತು ಎಂದು ಅವರು ಹೇಳಿದರು.
ಜನರಿಗಾಗಿಯೇ ಜೀವನ ಮುಡಿಪಾಗಿಟ್ಟವರು ಅವರು. ಅತ್ಯಂತ ಸರಳ ಜೀವನ ನಡೆಸಿದ್ದರು. ಅವರಿಗೆ ಗೌರವ ಸಲ್ಲಿಸಲು ಈ ಭವನ ನಿರ್ಮಾಣ ಮಾಡಲಾಗಿದೆ.
ಅವರ ಸಾರ್ಥಕ ಜೀವನದ ಧ್ಯೋತಕವಾಗಿ ಈ ಭವನವನ್ನು ಸಮಾಜಕ್ಕೆ ಅರ್ಪಣೆ ಮಾಡಲಾಗಿದೆ. ಸಮಾಜದ ಔನ್ನತ್ಯಕ್ಕಾಗಿ ಈ ಭವನ ಬಳಕೆಯಾಗಲಿ. ಪೂರ್ಣ ರೂಪದಲ್ಲಿ ಸಾರ್ಥಕವಾಗಲಿ ಎಂದು ಹೊಸಬಾಳೆ ಹೇಳಿದರು.

ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಸ್ವಾಗತಿಸಿದರು. ಜನಕಲ್ಯಾಣ ಟ್ರಸ್ಟ್ ನ ನಿರ್ವಾಹಕ ವಿಶ್ವಸ್ಥ ಅರವಿಂದ ರಾವ್ ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು. ಆರ್ ಎಸ್ಎಸ್ ಪ್ರಾಂತ ಕಾರ್ಯದರ್ಶಿ ರಾಘವೇಂದ್ರ ಕಾಗವಾಡ,
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿದ್ಯಾಭಾರತಿ ಪ್ರಾಂತ ಅಧ್ಯಕ್ಷ ಪರಮೇಶ್ವರ ಹೆಗಡೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಯೋಧ್ಯಾ ರಾಮಮಂದಿರ ನಿರ್ಮಾಣ ಟ್ರಸ್ಟ್ ಉಸ್ತುವಾರಿ ಗೋಪಾಲಜಿ, ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವರಾದ ಸಿ.ಟಿ.ರವಿ, ಮುರುಗೇಶ ನಿರಾಣಿ, ಕೆ.ಎಸ್. ಈಶ್ವರಪ್ಪ, ಸಿ.ಸಿ.ಪಾಟೀಲ, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರ, ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ರಮೇಶ ಜಾರಕಿಹೊಳಿ, ಜಗದೀಶ್ ಶೆಟ್ಟರ್, ಲೋಕಸಭೆಯ ಮಾಜಿ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಶಾಸಕರಾದ ಅಭಯ ಪಾಟೀಲ, ವಿಠ್ಠಲ ಹಲಗೇಕರ್, ನಿಖಿಲ್ ಕತ್ತಿ, ಮಾಜಿ ಶಾಸಕರಾದ ಅನಿಲ ಬೆನಕೆ, ಜಗದೀಶ್ ಮೆಟಗುಡ್ಡ, ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಮಾಜಿ ಸಂಸದರಾದ ಮಂಗಲಾ ಅಂಗಡಿ, ರಮೇಶ ಕತ್ತಿ, ಕಟ್ಟಡ ನಿರ್ಮಾಣ ಮಾಡಿದ ಚೈತನ್ಯ ಕುಲಕರ್ಣಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಸೋನಾಲಿ ಸರ್ನೋಬತ್, ಮೇಯರ್ ಪ್ರೀತಿ ಕಾಮಕರ, ಪ್ರಮೋದ ಮುತಾಲಿಕ, ಕೃಷ್ಣ ಭಟ್, ಎಂ.ಬಿ.ಜಿರಲಿ, ಶಂಕರಗೌಡ ಪಾಟೀಲ, ಕಿರಣ ಜಾಧವ ಸೇರಿದಂತೆ ನೂರಾರು ಸಂಘದ ಪ್ರಮುಖರು ಉಪಸ್ಥಿತರಿದ್ದರು.



