*ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ- ಕತ್ತಿ ಮುಖಾಮುಖಿ: ಪರಸ್ಪರ ಅಪ್ಪಿಕೊಂಡು ಮಾತುಕತೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಹಾಗೂ ರಮೇಶ್ ಕತ್ತಿ ಇಬ್ಬರು ನಾಯಕರು ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿರುವ ಘಟನೆ ನಡೆದಿದೆ.
ಈ ವೇಳೆ ಇಬ್ಬರು ನಾಯಕರು ಪರಸ್ಪರ ಅಪ್ಪಿಕೊಂಡು ಮಾತುಕತೆ ನಡೆಸಿದರು. ಹುಕ್ಕೇರಿ ಕೆಇಬಿ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಡೆದ ಹೋರಾಟದಲ್ಲಿ ಜಾರಕಿಹೊಳಿ ಹಾಗೂ ಕತ್ತಿ ಗುಂಪುಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಹುಕ್ಕೇರಿಯಲ್ಲಿ ಇಂದಿಗೂ ಎರಡು ಕುಟುಂಬಗಳ ನಡುವೆ ಫೈಟ್ ಮುಂದುವರೆದಿದೆ. ಇಂತಹ ಸಂದರ್ಭದಲ್ಲಿಯೇ ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ರಮೇಶ್ ಕತ್ತಿ ಪರಸ್ಪರ ಅಪ್ಪುಗೆ ಮೂಲಕ ಆತ್ಮೀಯತೆಯನ್ನು ಪ್ರದರ್ಶಿಸಿದ್ದು ತೀವ್ರ ಕುತೂಹಲ ಮೂಡಿಸಿದೆ.
ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿಗೆ ಹೋರಾಟದ ವೇಳೆ ರಮೇಶ ಸೈಲೆಂಟ್ ಆಗಿದ್ದರು. ಇಂದು ರಮೇಶ ಜಾರಕಿಹೊಳಿ, ರಮೇಶ ಕತ್ತಿ ಪರಸ್ಪರ ಆತ್ಮೀಯತೆ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




