Kannada NewsKarnataka NewsLatest

*ಕರಿಮಣಿ ಮಾಲೀಕ ನೀನಲ್ಲ…ಎಂದು ರೀಲ್ಸ್ ಮಾಡಿದ ಪತ್ನಿ; ಆತ್ಮಹತ್ಯೆಗೆ ಶರಣಾದ ಪತಿ…!*

ಪ್ರಗತಿವಾಹಿನಿ ಸುದ್ದಿ: ಪತ್ನಿಯ ರೀಲ್ಸ್ ಗೆ ಬೇಸತ್ತ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಪಿ.ಜಿ.ಪಾಳ್ಯದಲ್ಲಿ ನಡೆದಿದೆ.

ಕುಮಾರ್ 33 ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ರೀಯಲ್ ಸ್ಟಾರ್ ಉಪೇಂದ್ರ ಅಭಿನಯದ ಉಪೇಂದ್ರ ಸಿನಿಮಾದ ’ಓ ನಲ್ಲ, ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ’ ಎಂಬ ಹಾಡು ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಟ್ರೆಂಡ್ ನಲ್ಲಿದೆ. ಈ ಹಾಡಿಗೆ ರೀಲ್ಸ್ ಮಾಡಿ ಗಮನ ಸೆಳೆಯುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಮಹಿಳೆಯೊಬ್ಬರು ಈ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ ಮನನೊಂದ ಪತಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

Home add -Advt

ಕುಮಾರ್ ಪತ್ನಿ ರೂಪಾ, ತನ್ನ ಸೋದರ ಮಾವ ಹಾಗೂ ಸಹೋದರಿ ಜತೆಗೆ ಸೇರಿ ಈ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಳಂತೆ. ಇದನ್ನು ನೋಡಿದ ಊರಿನ ಕೆಲವರು ಯಾರಪ್ಪ ಕರಿಮಣಿ ಮಾಲೀಕ? ಎಂದು ಕುಮಾರ್ ಕಾಲೆಳೆದಿದ್ದಾರೆ.

ಪತ್ನಿಯ ರೀಲ್ಸ್ ನೋಡಿ ಆತನ ಗೆಳೆಯರು ಕೂಡ ರೇಗಿಸಿದ್ದಾರಂತೆ. ಇದರಿಂದ ಸಿಟ್ಟಿಗೆದ್ದ ಕುಮಾರ್, ಪತ್ನಿ ರೂಪಾ ಜೊತೆ ಗಲಾಟೆ ಮಾಡಿದ್ದಾನೆ. ಬಳಿಕ ಏಕಾಏಕಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.


Related Articles

Back to top button