*ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ; ಬೆಳಗಾವಿಯಲ್ಲಿ ಎಬಿವಿಪಿ ಪ್ರತಿಭಟನೆ*
ಪ್ರಗತಿವಾಹಿನಿ ಸುದ್ದಿ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಅವರ ಗೆಲುವಿನ ಸಂದರ್ಭದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಖಂಡನೀಯ, ಕೂಡಲೇ ಸರ್ಕಾರ ತಪ್ಪಿಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿವತಿಯಿಂದ ನಗರದ ಆರ್ ಪಿ ಡಿ ವೃತ್ತದಲ್ಲಿ ರಸ್ತೆ ತಡೆಯಿಡಿದು ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಲಾಯಿತು.
ಪಾಕಿಸ್ತಾನದ ಪರವಾಗಿ ಜೈಕಾರ ಹಾಕಿದ್ದನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಗೋಮಟೇಶ್ ವಿದ್ಯಾಪೀಠದಿಂದ ಆರ್ ಪಿ ಡಿ ವೃತ್ತದ ವರೆಗೆ ವಿದ್ಯಾರ್ಥಿಗಳು ಈ ಘಟನೆಯನ್ನು ವಿರೋಧಿಸಿ ದಿಕ್ಕಾರವನ್ನು ಹೇಳುತ್ತಾಸಾಗಿದು. ಕೆಲ ಕಾಲ ಆರ್ ಪಿ ಡಿ ವೃತ್ತವನ್ನು ತಡೆಯಿಡಿದು ಪ್ರತಿಭಟಿಸಲಾಯಿತು.
ಎಬಿವಿಪಿ ರಾಜ್ಯ ಕಾನೂನು ಸಂಚಾಲಕ ರೋಹಿತ್ ಉಮನಾಬಾದಿಮಠ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಅತೀ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ , ಸಂವಿಧಾನದ ರಕ್ಷಣೆಯ ಸ್ಥಳವಾದ ವಿಧಾನಸೌಧದಲ್ಲಿ ನಮ್ಮ ಬದ್ದ ವೈರಿ ದೇಶದ ಪರವಾಗಿ ಘೋಷಣೆ ಹಾಕುತ್ತಿರುವುದು ದೇಶಕ್ಕೆ ಮಾರಕವಾಗಿದೆ. ಇಂತಹ ಜನರನ್ನ ಕೂಡಲೆ ಬಂಧಿಸಿ ಅವರಿಗೆ ಕಠಿಣವಾದ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಂತರ ರಾಜ್ಯ ಸಹ ಕಾರ್ಯದರ್ಶಿ ಮನೋಜ್ ಪಾಟೀಲ್ ಮಾತನಾಡಿ ಒಂದು ಕಡೆ ಕಾಂಗ್ರೆಸ್ ಸಂವಿಧಾನ ಜಾಗೃತಿಯ ಯಾತ್ರೆ ಮಾಡುತ್ತಿದ್ದರೆ ಇಲ್ಲಿ ಅವರದೆ ಪಕ್ಷದ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆಯನ್ನು ಹಾಕುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಈ ದೇಶ ವಿರೋಧಿ ಚಟುವಟಿಕೆಯನ್ನು ಕೆಲವೊಂದಿಷ್ಟು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಹೋರಾಟದಲ್ಲಿ ರೋಹಿತ್ ಅಲಕುಂಟೆ,ಮನೋಜ ಪಾಟೀಲ, ಮಲ್ಲಿಕಾರ್ಜುನ ಪೂಜಾರಿ, ದೇವೇಂದ್ರ ಸನ್ನಮಣ್ಣವರ, ಪಣಿರಾಘವೇಂದ್ರ ದೇಸಾಯಿ,ಅಕ್ಷಯ ವರದ, ಸಂದಿಪ ದಂಡಗಲ, ಯಲ್ಲಪ ಬೋಮನಹಳ್ಳಿ,ಪ್ರಜ್ವಲ ತಪಶಿ,ಬಾಲಾಜಿ ,ವಿಜಯ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ