Kannada NewsKarnataka NewsLatest

*ಕಲುಷಿತ ನೀರು ಸೇವನೆ; 18 ಜನರು ಅಸ್ವಸ್ಥ*

ಪ್ರಗತಿವಾಹಿನಿ ಸುದ್ದಿ: ಕಲುಷಿತ ನೀರು ಸೇವಿಸಿ 18ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಲ್ಲಾಪುರದಲ್ಲಿ ನಡೆದಿದೆ.

ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗ್ರಾಮಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಶಂಕರ್ ನಾಯ್ಕ್ ಭೇಟಿ ನೀಡಿ ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದಾರೆ.

Home add -Advt

ಪೈಪ್ ಲೈನ್ ಮೂಲಕ ಕಲುಷಿತ ನೀರು ಪೂರೈಕೆ ಆಗಿದೆ. ನೀರು ಸೇವಿಸಿದ ಬಳಿಕ ಗ್ರಾಮಸ್ಥರಲ್ಲಿ ವಾಂತಿ ಭೇದಿ ಆರಂಭವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Related Articles

Back to top button