Kannada NewsLatestNational

*ಹೋಮ್ ವರ್ಕ್ ಸರಿಯಾಗಿ ಮಾಡಿಲ್ಲ ಎಂದು ಕಪಾಳಕ್ಕೆ ಹೊಡೆದ ಟೀಚರ್: ಶಿಕ್ಷಕಿ ಮಡಿಲಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ 6 ವರ್ಷದ ಬಾಲಕ*

ಪ್ರಗತಿವಾಹಿನಿ ಸುದ್ದಿ: ಹೋಮ್‌ವರ್ಕ್ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು 6 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದು, ಶಿಕ್ಷಕಿಯ ಏಟಿಗೆ ಬಾಲಕ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಆಂಢ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಈ ದುರಂತ ಸಂಭವಿಸಿದೆ. ಹೋಮ್ ವರ್ಕ್ ಸರಿಯಾಗಿ ಮಾಡಿಲ್ಲ ಎಂದು ಶಿಕ್ಷಕಿ ಕೆಲ ವಿದ್ಯಾರ್ಥಿಗಳನ್ನು ನಿಲ್ಲಿಸಿ ಗದರುತ್ತಿದರು. ಕೆಲವರಿಗೆ ಹೊಡೆದು ಬೈದಿದ್ದರು. ಈ ವೇಳೆ 6 ವರ್ಷದ ಪ್ರಣವ್ ಎಂಬ ವಿದ್ಯಾರ್ಥಿಗೆ ಬೈದಿದ್ದಲ್ಲದೇ ಆತನ ಕತ್ತಲ್ಲಿದ್ದ ಟೈ ಹಿಡಿದು ಎಳೆದು ಬಿಟ್ಟಿದ್ದಾಳೆ. ವಿದ್ಯಾರ್ಥಿ ನೋವು ಹಾಗೂ ಭಯದಿಂದ ಬೇಡ ಬೇಡ ಎಂದು ಜೋರಾಗಿ ಅಳಲಾರಂಭಿಸಿದ್ದಾನೆ. ಆದಾಗ್ಯೂ ಶಿಕ್ಷಕಿಯ ಮನಸ್ಸು ಕರಗಿಲ್ಲ. ವಿದ್ಯಾರ್ಥಿಗೆ ಕಪಾಳಕ್ಕೆ ಬಾರಿಸಿದ್ದಾಳೆ. ಕ್ಷಣದಲ್ಲೇ ವಿದ್ಯಾರ್ಥಿ ಶಿಕ್ಷಕಿಯ ಮಡಿಲಲ್ಲೇ ಕುಸಿದು ಬಿದ್ದಿದ್ದಾನೆ.

ಹೀಗೆ ಕುಸಿದು ಬಿದ್ದ ವಿದ್ಯಾರ್ಥಿಯನ್ನು ಶಿಕ್ಷಕಿ ಮೇಲೆತ್ತಿದರೂ ಆತನಿಗೆ ಪ್ರಜ್ಞೆಯಿರಲಿಲ್ಲ. ಶಿಕ್ಷಕಿಯ ಏಟಿಗೆ ವಿದ್ಯಾರ್ಥಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಶಾಲೆಯ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಮಗುವಿನ ಸಾವಿಗೆ ಕಾರಣವದ ಶಿಕ್ಷಕಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಟ್ಟ ಮಕ್ಕಳು ಸಣ್ಣ ತಪ್ಪು ಮಾಡಿದರೆ ನಂಬಿಸಿ ಬುದ್ಧಿ ಹೇಳುವುದನ್ನು ಬಿಟ್ಟು ಕಪಾಳಮೋಕ್ಷ ಮಾಡಿ ಬಾಲಕನ ಜೀವವನ್ನೇ ತೆಗೆದಿದ್ದಾಳೆ ಶಿಕ್ಷಕಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button