ಬೆತ್ತಲೆಯಾಗಿ ಯುವತಿ ಬೈಕ್ ಓಡಿಸಿದ ಪ್ರಕರಣ ತನಿಖೆಗೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ನಗರದಲ್ಲಿ ಕಳೆದ 13ನೇ ತಾರೀಖು ರಾತ್ರಿ 10.20ರ ವೇಳೆಯಲ್ಲಿ ಯುವತಿಯೋರ್ವಳು ಬೆತ್ತಲೆಯಾಗಿ ಬೈಕ್ ಓಡಿಸಿಕೊಂಡು ಹೋಗಿದ್ದ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯುವತಿ ಬೈಕ್ ಓಡಿಸಿಕೊಂಡು ಹೋಗುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೆ ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಯುವತಿ ಬೈಕ್ ಓಡಿಸಿದ ದಿನವೇ ರಾತ್ರಿ ಪ್ರಗತಿವಾಹಿನಿ ಪ್ರಕಟಿಸಿದ ಸುದ್ದಿಗೆೆ ಇಲ್ಲಿ ಕ್ಲಿಕ್ ಮಾಡಿ – ಯಾರೀಕೆ, ಬೆತ್ತಲೆಯಾಗಿ ಬೈಕ್ ಓಡಿಸಿಕೊಂಡು ಹೋದಾಕೆ?
ಆರಂಭದಲ್ಲಿ ಯುವತಿ ಬೆತ್ತಲೆಯಾಗಿ ಹಿಂದೆ ಕುಳಿತಿರುವುದು, ಯುವಕನೋರ್ವ ಸ್ಕೂಟಿ ಓಡಿಸಿಕೊಂಡು ಹೋಗುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ವಲ್ಪ ದೂರ ಹೋದ ನಂತರ ಯುವಕ ಕೆಳಗಿಳಿಯುತ್ತಾನೆ. ಹಿಂದೆ ಕುಳಿತಿದ್ದ ಬೆತ್ತಲೆ ಯುವತಿ ಒಬ್ಬಳೇ ಸ್ಕೂಟಿ ಓಡಿಸಿಕೊಂಡು ಮುಂದೆ ಹೋಗುತ್ತಾಳೆ.
ಯುವಕ ಕೆಂಪು ಬಣ್ಣದ ಲಟಿ ಶರ್ಟ್ ಧರಿಸಿದ್ದು, ಬರ್ಮುಡಾ ಧರಿಸಿದ್ದಾನೆ. ಬಿಳೆ ಬಣ್ಣದ ಸ್ಕೂಟಿಯಲ್ಲಿ ಅವರು ಹೋಗಿದ್ದು, ಅದರ ನಂಬರ್ ಸರಿಯಾಗಿ ಕಾಣಿಸುವುದಿಲ್ಲ.
13ರ ರಾತ್ರಿ 10.20ರ ವೇಳೆ ಕ್ಲಬ್ ರಸ್ತೆಯಲ್ಲಿ ಯುವತಿಯೋರ್ವಳೇ ಸ್ಕೂಟಿ ಓಡಿಸಿಕೊಂಡು ಹೋಗಿದ್ದನ್ನು ನೋಡಿದವರು ನೀಡಿದ ಮಾಹಿತಿಯಂತೆ ಪ್ರಗತಿವಾಹಿನಿ ಅದೇ ದಿನ ರಾತ್ರಿ ಸುದ್ದಿ ಪ್ರಕಟಿಸಿತ್ತು. ನಂತರ ಈ ಕುರಿತ ಸಿಸಿಟಿವಿ ಕ್ಯಾಮರಾ ದೃಷ್ಯಾವಳಿ ವೈರಲ್ ಆಗಿತ್ತು.
ಪ್ರತ್ಯಕ್ಷದರ್ಶಿಗಳನ್ನು ಕರೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಯಾರೂ ದೂರು ದಾಖಲಿಸಿಲು ಮುಂದಾಗಲಿಲ್ಲ. ಹಾಗಾಗಿ ಪೊಲೀಸರೇ ಸ್ವಯಂ ಪ್ರೇರಿತರಾಗಿ ದೂರು ದಾಖಿಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ