ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಚಾಣ ಗ್ರಾಮದಲ್ಲಿ ಎರಡು ವರ್ಷದ ಮಗು ಕಾಲು ಜಾರಿ ಕೊಳವೆ ಬಾವಿ ಒಳಗಡೆ ಬಿದ್ದಿದೆ.
ಮಗುವಿನ ತಂದೆ ಸತೀಶ್ ನೀರು ಹಾಯಿಸಲು ತೋಟದಲ್ಲಿ ಕೊಳವೆ ಬಾವಿ ಕೊರೆಸಿದರು. ಎರಡು ವರ್ಷದ ಮಗು ಸಾತ್ವಿಕ ಆಟವಾಡುವ ಸಂದರ್ಭದಲ್ಲಿ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದಾನೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಜೆಸಿಬಿ ಮೂಲಕ ಗುಂಡಿ ತೊಡುವ ಕಾರ್ಯವು ನಡೆಯುತ್ತಿದೆ. ಜೊತೆಗೆ ಮಗುವಿಗೆ ಆಕ್ಸಿಜನ್ ನೀಡಲಾಗಿದೆ.
ಕಾರ್ಯಾಚರಣೆ ಅಡ್ಡಿಯಾದ ಕಲ್ಲು ಬಂಡೆ
ಮಗುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಕಲ್ಲು ಬಂಡೆ ಅಡ್ಡಿ ಆಗಿದೆ. ಕಲ್ಲನ್ನು ಒಡೆಯಲು ಹಿಟ್ಯಾಚಿ ಮೂಲಕ ಡಿಗ್ಗಿಂಗ್ ಕಾರ್ಯದ ಜೊತೆಗೆ ಬಂಡೆ ಒಡೆಯಲು ಅಗ್ನಿಶಾಮಕ ತಂಡ, ಬ್ರೇಕರ್ ತರಿಸಲಾಗಿದೆ. ಇಲ್ಲಿವರೆಗೆ 16 ಅಡಿ ಪೈಕಿ 10 ಅಡಿ ಡಿಗ್ಗಿಂಗ್ ಅಷ್ಟೆ ಆಗಿದೆ. ಕೊಳವೆ ಬಾವಿಯಲ್ಲಿ ಕಲ್ಲು ಬಂಡೆ ಅಡ್ಡಿ ಆಗಿದ್ದರಿಂದ ಕಾರ್ಯಾಚರಣೆ ನಿಧಾನ ಗತಿಯಲ್ಲಿ ಸಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ