Kannada NewsKarnataka NewsLatestPolitics

*ಕಮಲ ಹಿಡಿದು ಪ್ರಧಾನಿ ಮೊದಿ ಬಗ್ಗೆ ಹಾಡಿ ಹೊಗಳಿದ ಸುಮಲತಾ*

ಪ್ರಗತಿವಾಹಿನಿ ಸುದ್ದಿ: ಮಂಡ್ಯ ಸಂಸದೆ ಸುಮಲತಾ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ಅವರು, ಸುಮಲತಾಗೆ ಬಿಜೆಪಿ ಪಕ್ಷದ ಶಾಲು ಹಾಕಿದ ಯಡಿಯೂರಪ್ಪ ಅವರು ಪಕ್ಷಕ್ಕೆ ಬರ ಮಾಡಿಕೊಂಡರು.

ಬಜೆಪಿ ಪಕ್ಷ ಸೇರಿದ ಬಳಿಕ ಮಾತಮಾಡಿದ ಸುಮಲತಾ ಅಂಬರೀಶ್ ಅವರು, ಇವತ್ತಿನ ದಿನ ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಸುದಿನ. 5 ವರ್ಷಗಳ ಹಿಂದೆ ಐತಿಹಾಸಿಕ ಗೆಲುವು ಸಿಕ್ಕಿತ್ತು ಅದನ್ನು ಮರೆಯುವಂತಿಲ್ಲ. ನಮ್ಮ ಮಂಡ್ಯದ ಜನ ಸಾಕಷ್ಟು ಸಹಕಾರ, ಬೆಂಬಲ ಕೊಟ್ಟಿದ್ದಾರೆ.‌ ಚುನಾವಣೆ ಸ್ಪರ್ಧಿಸಿದಾಗ ಬಿಜೆಪಿ ಪಕ್ಷವು ಬಾಹ್ಯ ಬೆಂಬಲ ಕೊಟ್ಟಿದೆ. ಮೋದಿಯವರ ನನಗೆ ಕೊಟ್ಟ ಸಹಕಾರವನ್ನು ಮರೆಯುವಂತಿಲ್ಲ ಎಂದು ಬಿಜೆಪಿ ಪಕ್ಷ ಸೇರಿದ ಬಳಿಕ ಸುಮಲಾತ ಅಂಬರಿಷ ಅವರು ತಿಳಿಸಿದ್ದಾರೆ.‌

5 ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೀನಿ. ಅಂಬರೀಶ್ ಅವರು 25 ವರ್ಷ ಕಾಂಗ್ರೆಸ್ ನಲ್ಲಿ ಇದ್ದವರು. ನಾನು ಪಾರ್ಲಿಮೆಂಟ್ ಗೆ ಬಂದಾಗ ನನಗೆ ಮಾರ್ಗದರ್ಶನ ಕೊಟ್ಟವರು ಬಿಜೆಪಿ ನಾಯಕರು. ನನ್ನ ರಾಜಕೀಯದ ಪ್ರಭಾವಿ ನಾಯಕ ಮೋದಿ ಅವರು. ಮೋದಿ ಅವರ ಭಾಷಣ ಕೇಳಿದಾಗ ನನಗೆ ಹೆಚ್ಚು ಅನುಭವ ಆಯ್ತು. ಇವೆಲ್ಲವನ್ನೂ ನೋಡಿ ಬಿಜೆಪಿ ಸೇರಬೇಕೆಂದು ತೀರ್ಮಾನ ಮಾಡಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನನ್ನನ್ನು ಕರೆದು ಜಿಲ್ಲೆಯ ಸಮಸ್ಯೆ ಕೇಳಿದ್ದರು, ಮೈ ಶುಗರ್ ಕಾರ್ಖಾನೆ ತೆರೆಯುವಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರ ಪಾತ್ರ ದೊಡ್ಡದು, ಇವತ್ತು ಅದರ ಕ್ರೆಡಿಟ್ ಯಾರ್ಯಾರೋ ತಗೊತಿದ್ದಾರೆ, ಅದು ಸರಿಯಲ್ಲ, ಅದರ ಕ್ರೆಡಿಟ್ ಬಿಜೆಪಿದು ಎಂದು ತಿಳಿಸಿದರು.

ಮೋದಿ ಅವರು ನುಡಿದಂತೆ ನಡೆಯುತ್ತಾರೆ, ಮೋದಿ ಅವರ ಕನಸಿಗೆ ನಾವೆಲ್ಲಾ ಕೈಜೋಡಿಸಬೇಕು. ನನಗೆ ನನ್ನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ, ನನ್ನ ಜಿಲ್ಲೆ, ರಾಜ್ಯ, ಬಿಜೆಪಿ ಮುಖ್ಯ. ಮುಂದಿನ ದಿನಗಳಲ್ಲಿ ಎಲ್ಲರ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೀನಿ ಎಂದು ಹೇಳಿದರು.

ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮಾಜಿ‌ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ‌, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಸದಾನಂದಗೌಡ, ಮಾಜಿ ಸಚಿವರಾದ ಗಾಲಿ ಜನಾರ್ಧನರೆಡ್ಡಿ, ಸಿಟಿ ರವಿ ಸೇರಿ, ನಾರಾಯಣಗೌಡ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಹಲವರು ಭಾಗಿ ಆಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button