Kannada NewsKarnataka NewsLatest

*ಲಾಡ್ಜ್ ನಲ್ಲಿ ಸಾವಿರಾರು ಸೀರೆಗಳು ಪತ್ತೆ: ಲಾಡ್ಜ್ ನ ಎರಡು ಕೊಠಡಿ ಸೀಜ್*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಸಮಯದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಲಾಡ್ಜವೊಂದರಲ್ಲಿ ಸಾವಿರಾರು ಸೀರೆಗಳು ಪತ್ತೆ ಆಗಿದ್ದು, ಯಾವುದೇ ದಾಖಲೆ ಇಲ್ಲದ ಅನಧಿಕೃತ ಸೀರೆಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Home add -Advt

ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷದ ರೂಪದಲ್ಲಿ ಸೀರೆಗಳನ್ನು ಹಂಚಲು ತಂದಿರಬಹುದೆಂಬ ಅನುಮಾನ ಹುಟ್ಟಿಕೊಂಟಿದ್ದು, ಹೊಸಪೇಟೆಯ ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ಮಾಡಿದ್ದಾರೆ.

ಇನ್ನೂ ಈ ಸೀರೆಗಳು ಯಾವ ಪಕ್ಷಕ್ಕೆ ಸೇರಿವೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಹೊಸಪೇಟೆಯ ಖಾಸಗಿ ಲಾಡ್ಜವೊಂದರ ಎರಡು ಕೊಠಡಿಗಳಲ್ಲಿ ಸೀರೆಗಳು ಪತ್ತೆಯಾಗಿವೆ. ಹೊಸಪೇಟೆ ಠಾಣಾ ಸಿಬ್ಬಂದಿಯು ಆ ಎರಡು ಕೊಠಡಿಗಳನ್ನತ ಲಾಕ್ ಮಾಡಿ ತಮ್ಮ ವಶಕ್ಕ ತೆಗೆದುಕೊಂಡಿದ್ದಾರೆ.

Related Articles

Back to top button