Kannada NewsKarnataka NewsLatest

*ತೋಳಗಳ ದಾಳಿಗೆ 20 ಕುರಿಗಳು ಬಲಿ*

ಪ್ರಗತಿವಾಹಿನಿ ಸುದ್ದಿ: ತೋಳಗಳ ದಾಳಿಗೆ 20 ಕುರಿಗಳು ಬಲಿ ಆಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹೊರವಲಯದಲ್ಲಿ ನಡೆದಿದ್ದು, ತೆಲುಗುರ ದೊಡ್ಡ ರಂಗಪ್ಪ ಸೇರಿದ ಸುಮಾರು 20 ಕುರಿಗಳು ತೋಳಗಳ ದಾಳಿಗೆ ಬಲಿ ಆಗಿದೆ.

Home add -Advt

ಕುರಿ ಹಟ್ಟಿಗೆ ನುಗ್ಗಿ ಕುರಿ ಮರಿಗಳನ್ನು ತೋಳಗಳು ತಿಂದುಹಾಕಿವೆ.‌ ಇನ್ನುಳಿದ ಕುರಿಗಳಿಗೆ ಸಣ್ಣಪುಟ್ಟ ತೀವ್ರ ಗಾಯಗಳಾಗಿವೆ.‌ ನರಿಗಳ ದಾಳಿಯಿಂದ ಸುಮಾರು ಒಂದು ಲಕ್ಷ ಮೌಲ್ಯದಷ್ಟು ನಷ್ಟಾಗಿದ್ದು, ರೈತ ತೆಲುಗುರ ದೊಡ್ಡ ರಂಗಪ್ಪ ಅವರು ಕಣ್ಣಿರು ಹಾಕಿದ್ದಾರೆ.

ಸ್ಥಳಕ್ಕೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಗಂಗಾಧರ ಮತ್ತು ಗ್ರಾಮದ ಪಶು ವೈದ್ಯ ಶಿವರಾಜ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸತ್ತ ಕುರಿಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದ ನೀಡಿದ್ದಾರೆ.

Related Articles

Back to top button