ನನ್ನ ಜಮೀನು ಉಳಿಸಿಕೊಡಿ, ವೀಡಿಯೋ ಹರಿಬಿಟ್ಟ ಯೋಧ
ಪ್ರಗತಿವಾಹಿನಿ ಸುದ್ದಿ : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತನ್ನ ಹಳ್ಳಿ ಎಲ್ಲಪಲ್ಲಿಯಲ್ಲಿರುವ ತನ್ನ ಜಮೀನು ಉಳಿಸಲು ಕೋರಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಒತ್ತಾಯಿಸಿ ಸೈನಿಕನೊಬ್ಬ ವೀಡಿಯೊ ಮಾಡಿದ್ದಾನೆ. ತಮ್ಮ ಜಮೀನನ್ನು ಸ್ಥಳೀಯರು ಕಬಳಿಕೆ ಮಾಡಿದ್ದಾರೆ, ತಮ್ಮ ಅಸಾಯಕ ತಾಯಿಗೆ ಸಹಾಯ ಮಾಡಿ ಎಂದು ಕೋರಿದ್ದಾರೆ. ಸಧ್ಯ ಈ ವೀಡಿಯೋ ಸಾಮಾಜಿಕ ಆಲತಾಣದಲ್ಲಿ ವೈರಲ್ ಆಗಿದೆ.
ಟಿ ವಿ ಚಂದ್ರ ಬಾಬು ಎಂಬ ಸೈನಿಕ ಈ ವಿಡಿಯೋವನ್ನು ತಮ್ಮ ರಕ್ತಸಂಬಂಧಿ ಮತ್ತು ಗ್ರಾಮಸ್ಥರೊಂದಿಗೆ ವಾಟ್ಸಾಪ್ ಮೂಲಕ ಹಂಚಿಕೊಂಡಿದ್ದಾರೆ. ಆದರೆ, ಭೂ ಕಬಳಿಕೆಯಂತಹ ಯಾವುದೇ ಘಟನೆಯನ್ನು ಸರ್ಕಾರಿ ಅಧಿಕಾರಿಗಳು ನಿರಾಕರಿಸಿದ್ದಾರೆ .
ವೀಡಿಯೋ ಸಂದೇಶದಂತೆ “ನಾನು ಚಂದ್ರ ಬಾಬು ಮತ್ತು ನನ್ನ ಸಹೋದರ ದೇವೇಂದರ್, ನಾವು ಚಿತ್ತೂರು ಜಿಲ್ಲೆಯ ಗಂಗಾಧರ ನೆಲ್ಲೂರು ಮಂಡಲದ ಎಲ್ಲಪಲ್ಲಿ ಗ್ರಾಮದವರು . 17 ವರ್ಷಗಳ ಕಾಲದಿಂದ ನಾನು ಮತ್ತು ನನ್ನ ಸಹೋದರ ಭಾರತೀಯ ಸೇನೆಯಲ್ಲಿದ್ದೇವೆ. ಶೋಭನ್ ಬಾಬು ಮತ್ತು ಸಾಂಬಶಿವ ರಾವ್ ಎಂಬ ಇಬ್ಬರು ವ್ಯಕ್ತಿಗಳು ನಮ್ಮ 3 ಎಕರೆ ಮತ್ತು 60 ಸೆಂಟ್ಸ್ ಭೂಮಿಯನ್ನು ಕಬಾಳಿಕೆ ಮಾಡಿದ್ದಾರೆ ದಯಮಾಡಿ ತಮ್ಮ ತಾಯಿಗೆ ಸಹಾಯ ಮಾಡಿ” ಎಂದು ಚಂದ್ರ ಬಾಬು ಮನವಿ ಮಾಡಿದ್ದಾರೆ.
ಅಲ್ಲದೇ ” ಅವರು ನಕಲಿ ದಾಖಲೆಗಳನ್ನು ರಚಿಸಿ ನಮ್ಮ ಜಮೀನನ್ನು ಕಸಿದುಕೊಂಡಿದ್ದಾರೆ. ಹಾಗೂ ನಮ್ಮ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ನಮ್ಮ ತಾಯಿಯನ್ನು ರಕ್ಷಿಸಲು ಗ್ರಾಮಾಳಿತ ಮತ್ತು ಯುವಕರನ್ನು ನಾನು ವಿನಂತಿಸುತ್ತೇನೆ. ದಯವಿಟ್ಟು ನಮಗೆ ನ್ಯಾಯ ಒದಗಿಸಿ, ಈ ವಿಡಿಯೋವನ್ನು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿರವರಿಗೆ ತಲುಪುವವರೆಗೆ ಹಂಚಿಕೊಳ್ಳಿ “ಎಂದು ಅವರು ಹೇಳಿ ಕೊಂಡಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮಾಡಳಿತ ಕಾರ್ಯಕ್ಕೆ ಧುಮುಕಿತು. ಮಂಡಲ್ ಕಂದಾಯ ಅಧಿಕಾರಿ ಭವಾನಿ ಭೂ ಕಬಳಿಕೆ ಆರೋಪ ಸುಳ್ಳು, ಎಂದು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಅವರು ಹೇಳಿಕೊಂಡಂತೆ ಯಾವುದೇ ಭೂಮಿಯನ್ನು ಮಂಜೂರು ಮಾಡಿಲ್ಲ. ಚಂದ್ರಬಾಬು ಪ್ರತಿಪಾದಿಸಿದಂತೆ ಭೂ ಕಬಳಿಕೆದಾರರು ಕುಟುಂಬದ ಸಂಬಂಧಿಗಳು. ಇಬ್ಬರ ನಡುವೆ ಕೆಲವು ವಿವಾದಗಳಿವೆ. ಆದರೆ ಭೂ ಕಬಳಿಕೆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ “ಎಂದು ತಿಳಿಸಿದ್ದಾರೆ.
ಹಾಗಾದರೆ ಆ ಸೈನಿಕ ಯಾವ ಉದ್ದೇಶಕ್ಕೆ ವೀಡಿಯೋ ಮಾಡಿದ್ದಾನೋ, ತಿಳಿದು ಬರುತ್ತಿಲ್ಲ. ಸಧ್ಯ ಈ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಹಾಗಿದ್ದೂ ಅಧಿಕಾರಿಗಳಿಗೆ ತಲೆ ಬಿಸಿ ಮಾಡಿದೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ