ಪ್ರಗತಿವಾಹಿನಿ ಸುದ್ದಿ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಬೆಟ್ಟಹಳ್ಳಿ ಗ್ರಾಮದ ಒಂದುವರೆ ವರ್ಷದ ಅವಳಿ ಮಕ್ಕಳು ಐಸ್ ಕ್ರೀಂ ತಿಂದ ಬಳಿಕ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ಮೃತ ಕಂದಮ್ಮಗಳು ಪೂಜಾ ಹಾಗೂ ಪ್ರಸನ್ನ ದಂಪತಿಯ ಮಕ್ಕಳು.
ನಿನ್ನೆ ಮಧ್ಯಾಹ್ನ ಗ್ರಾಮಕ್ಕೆ ತಳ್ಳುಗಾದಿಯಲ್ಲಿ ಐಸ್ ಕ್ರೀಂ ಬಂದಿತ್ತು. ತಾಯಿ ಪೂಜಾ ಅವಳಿ ಮಕ್ಕಳಿಗೆ ಐಸ್ ಕ್ರೀಂ ತೆಗೆಸಿಕೊಟ್ಟಿದ್ದರು. ಅಲ್ಲದೇ ಮಕ್ಕಳ ಜೊತೆ ತಾನೂ ಐಸ್ ಕ್ರೀಂ ತೆಗೆದುಕೊಂಡು ಸೇವಿಸಿದ್ದರು. ಗ್ರಾಮದಲ್ಲಿ ಇನ್ನೂ ಹಲವು ಮಕ್ಕಳು ಅದೇ ತಳ್ಳು ಗಾಡಿಯ ಐಸ್ ಕ್ರೀಂ ಸೇವಿಸಿದ್ದಾರೆ.
ಐಸ್ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳಿಬ್ಬರೀ ಅಸ್ವಸ್ಥರಾಗಿದ್ದು, ಕೊನೆಯುಸಿರೆಳೆದಿದ್ದಾರೆ. ಐಸ್ ಕ್ರೀಂ ತಿಂದಿದ್ದ ಬೇರಾರಿಗೂ ಯಾವುದೇ ಸಮಸ್ಯೆಯಾಗಿಲ್ಲ. ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ