Kannada NewsKarnataka NewsLatest

*ಕುಖ್ಯಾತ ರೌಡಿ ಶೀಟರ್ ಕೊಲೆಗೆ ಜೈಲಿನಿಂದಲೇ ಸುಪಾರಿ ಕೊಟ್ಟ ಮತ್ತೊಬ್ಬ ರೌಡಿ *

ಪ್ರಗತಿವಾಹಿನಿ ಸುದ್ದಿ; ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ ಹತ್ಯೆಗೆ ಸ್ಕೆಚ್ ಹಾಕಿದ್ದ ಇಬ್ಬರು ಆರೋಪಿಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Home add -Advt

ಕಳೆದ ಎರಡು ಮೂರು ತಿಂಗಳ ಹಿಂದಷ್ಟೇ ಗಿರಿ ಜೈಲಿನಿಂದ ರಿಲೀಸ್ ಆಗಿ ಸೈಲೆಂಟಾಗಿದ್ದ ಆದರೆ ಕುಣಿಗಲ್ ಗಿರಿ ಹತ್ಯೆ ಮಾಡಲು ಸುಪಾರಿ ನೀಡಲಾಗಿತ್ತು.‌ ಗಿರಿಯನ್ನು ಕೊಲೆ ಮಾಡಲು ರಾಬರಿ ಕಿಟ್ಟಿ ಜೈಲಿನಿಂದ ಸುಪಾರಿ ಕೊಟ್ಟಿದ್ದಾನೆ ಎನ್ನಲಾಗಿದೆ.‌

ಸದ್ಯ ರಾಬರಿ ಕಿಟ್ಟಿ ಕ್ಯಾಪ್ಟನ್ ಸೂರಿ ಮರ್ಡರ್ ಕೇಸ್ ನಲ್ಲಿ ತುಮಕೂರು ಜೈಲಿನಲ್ಲಿದ್ದಾನೆ. ತನ್ನ ಶಿಷ್ಯನಾದ ಕೆಂಗೇರಿ ರೌಡಿ ಶೀಟರ್ ಸುನೀಲ @ ಸಿಲಿಂಡ ರ್ ಸುನೀಲಗೆ ಸುಪಾರಿ ಕೊಟ್ಟಿದ್ದಾನೆ.‌ ಬಳಿಕ ಸುನೀಲ ಅಂಡ್ ಗ್ಯಾಂಗ್ ಗಿರಿ ಕೊಲೆಗೆ ಪ್ಲಾನ್ ಮಾಡಿದ್ದಾರೆ.‌ ಇದರ ಬಗ್ಗೆ ಪಕ್ಕಾ ಮಾಹಿತಿ ಪಡೆದ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿ ಸಿಬ್ಬಂದಿ, ರೌಡಿ ಸುನೀಲ್‌ನ ರೂಮ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ  ಲಾಂಗು ಮಚ್ಚಿನ ಸಮೇತ ಸುನೀಲ್ ಲಾಕ್ ಆಗಿದ್ದಾನೆ. ಸುನೀಲ್ ಜೊತೆಗೆ ಮಂಡ್ಯ ಮೂಲದ ಅವಿನಾಶ್ ಅನ್ನೋನು ಸಿಕ್ಕಿ ಬಿದ್ದಿದ್ದಾನೆ. ಇನ್ನು ಇನ್ನಿಬ್ಬರು ಎಸ್ಕೇಪ್ ಆಗಿದ್ದಾರೆ. ಪೊಲೀಸರು ಆ ಆರೋಪಿಗಳಿಗೂ ಬಲೆ ಬೀಸಿದ್ದಾರೆ. ಈ ಬಗ್ಗೆ ಕಾಮಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button