Kannada NewsKarnataka NewsLatest

*100 ಅಡಿ ಕಂದಕಕ್ಕೆ ಬಿದ್ದ್ ಬಸ್: ಬಚಾವ್ ಆದ 29 ಪ್ರಯಾಣಿಕರು*

ಪ್ರಗತಿವಾಹಿನಿ ಸುದ್ದಿ : ರಜಾ ದಿನಗಳನ್ನು ಕಳೆಯಲು ಬಂದಿದ್ದ ಪ್ರವಾಸಿಗರ ಬಸ್ಸು 100 ಅಡಿ ಕಂದಕಕ್ಕೆ ಬಿದ್ದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನಿಂದ ಬಂದಿದ್ದ ಪ್ರವಾಸಿಗರ ಬಸ್ ಮುಳ್ಳಯ್ಯನಗಿರಿಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಚಂದ್ರದ್ರೋಣ ಪರ್ವತದ ತಿರುವಿನಲ್ಲಿ ಬಸ್‌ ಪಲ್ಟಿಯಾಗಿದೆ. ಪರಿಣಾಮ 23 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 6 ಜನರಿಗೆ ಗಂಭೀರ ಗಾಯಗಳಾಗಿವೆ.

Home add -Advt

ರಾಜಾ ದಿನ ಆಗಿದ್ದರಿಂದ ಅತಿ ಹೆಚ್ಚಿನ ಜನರು ಬೆಟ್ಟಕ್ಕೆ ಆಗಮಿಸಿದ್ದು, ಬಸ್ ಪಲ್ಟಿಯಾಗುತ್ತಿದ್ದಂತೆ ಜನರು ಆಗಮಿಸಿ ಪ್ರಯಾಣಿಕರನ್ನು ರಕ್ಷಿಸಿ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

Related Articles

Back to top button