Belagavi NewsBelgaum NewsEducationKannada NewsKarnataka NewsLatest

*ಬೆಳಗಾವಿಯ ಖಾಸಗಿ ಉರ್ದು ಶಾಲೆಗೆ ಶಾಕ್: ಮಾನ್ಯತೆ ರದ್ದು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಆಜಾದ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸಲಂಟ್ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯು (1 ರಿಂದ 5ನೇ ತರಗತಿ) ಮಾನ್ಯತೆ ಇಲ್ಲದೇ ಹಾಗೂ 6 ಮತ್ತು 7ನೇ ತರಗತಿಗಳನ್ನು ಅನುಮತಿ ಇಲ್ಲದೇ ನಡೆಸಿ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿರುತ್ತದೆ.

ಸದರಿ ಶಾಲೆಯ ನೋಂದಣಿಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್ 34 (2) ಎ ಅಡಿಯಲ್ಲಿ ರದ್ದುಪಡಿಸಲು ಹಾಗೂ ಸೆಕ್ಷನ್ 39(2) ರ ಅಡಿಯಲ್ಲಿ ಮಾನ್ಯತೆಯನ್ನು ಹಿಂಪಡೆಯಲು ಹಾಗೂ ಡೈಸ್ ಕೋಡನ್ನು ರದ್ದು ಪಡಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ.

ಈಗಾಗಲೇ ಸಂಬಂಧ ಪಟ್ಟ ಇಲಾಖಾ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದರಿ ಶಾಲೆಗೆ ಶೈಕ್ಷಣಿಕ 2026-27ನೇ ಸಾಲಿಗೆ ಮಕ್ಕಳನ್ನು ದಾಖಲಿಸಬಾರದು ಎಂದು ಈ ಮೂಲಕ ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಸೂಚಿಸಿಲಾಗಿದೆ.

ಒಂದು ವೇಳೆ ಪೋಷಕರು ಮತ್ತು ಸಾರ್ವಜನಿಕರು ಈ ಎಚ್ಚರಿಕೆಯನ್ನು ಮೀರಿ ಮಕ್ಕಳನ್ನು ದಾಖಲಿಸಿದ್ದಲ್ಲಿ ಮುಂದೆ ಆಗುವ ಶೈಕ್ಷಣಿಕ ತೊಂದರೆಗಳಿಗೆ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ನಗರ ವಲಯ ಬೆಳಗಾವಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೈ.ಜಿ. ಭಜಂತ್ರಿ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Home add -Advt

Related Articles

Back to top button