Kannada NewsKarnataka NewsLatest

*ಎಸ್.ಎಸ್.ಎಲ್.ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ರುಂಡ ಕಡಿದು ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಊರಿಗೆ ಖುಷಿತಂದಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸೋರ್ಲಬ್ಬಿ ಗ್ರಾಮದಲ್ಲಿ ನಡೆದಿದೆ.

Home add -Advt

ನಿನ್ನೆಯಷ್ಟೇ ಎಸ್.ಎಸ್.ಎಲ್.ಸಿ ರಿಸಲ್ಟ್ ಬಂದಿದೆ. ಉತ್ತಮ ಅಂಕಗಳಿಸಿದ ಸಂಭ್ರಮದಲ್ಲಿದ್ದ ಮೀನಾ ಎಂಬ ವಿದ್ಯಾರ್ಥಿನಿಯ ತಲೆಯನ್ನು ಕತ್ತರಿಸಿ ವ್ಯಕ್ತಿ ಕ್ರೌರ್ಯ ಮೆರೆದಿದ್ದಾನೆ. ಓಂಕಾರಪ್ಪ ವಿದ್ಯಾರ್ಥಿನಿಯ ರುಂಡ ಕಡಿದ ಆರೋಪಿ.

ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿನಿಯನ್ನು ಕರೆದೊಯ್ದು ರುಂಡ-ಮುಂಡ ಬೇರ್ಪಡಿಸಿ ಅಟ್ಟಹಾಸ ಮೆರೆದಿದ್ದಾನೆ. ಇಷ್ಟಕ್ಕೂ ಕೃತ್ಯಕ್ಕೆ ಕಾರಣ ನಿನ್ನೆಯೇ ಓಂಕಾರಪ್ಪ ಜೊತೆ ವಿದ್ಯಾರ್ಥಿನಿ ಮೀನಾಳ ನಿಶ್ಚಿತಾರ್ಥವಾಗಿತ್ತು. ಇದನ್ನು ತಿಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕಾಗಮಿಸಿದ ಪೊಲೀಸರು ನಿಶ್ಚಿತಾರ್ಥ ನಿಲ್ಲಿಸಿದ್ದರು. ಬಳಿಕ ಎರಡೂ ಕುಟುಂಬದವರು ತಮ್ಮ ತಮ್ಮ ಮನೆಗೆ ವಾಪಾಸ್ ಆಗಿದ್ದರು. ನಿಶ್ಚಿತಾರ್ಥ ನಿಂತಿದ್ದಕ್ಕೇ ಸಿಟ್ಟಿಗೆದ್ದು ಆರೋಪಿ ಮೀನಾಳನ್ನು ಬರ್ಬರವಾಗಿ ಕೊಲೆ ಮಾಡಿರಬಹುದು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನೆ ನಡೆದ ಸ್ವಲ್ಪ ದೂರದಲ್ಲಿ ಮಚ್ಚು ಪತ್ತೆಯಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.


Related Articles

Back to top button