Kannada NewsKarnataka News

ಮಿಲ್ಟ್ರಿ ತರಬೇತಿ ವೇಳೆ ಕುಸಿದು ಬಿದ್ದು ಯುವಕನ ಸಾವು

ಮಿಲ್ಟ್ರಿ ತರಬೇತಿ ವೇಳೆ ಕುಸಿದು ಬಿದ್ದು ಯುವಕನ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಇಲ್ಲಿಯ ಮರಾಠಾ ಲೈಟ್ ಇನ್ ಫಂಟ್ರಿ ರೆಜಿಮೆಂಟ್ (ಎಂಎಲ್ ಐಆರ್ ಸಿ)ನಲ್ಲಿ ಇನ್ಸ್ಪೆಕ್ಟರ್ ತರಬೇತಿ ಪಡೆಯುತ್ತಿದ್ದಾಗ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟಿದ್ದಾನೆ.

Home add -Advt

ಕೊಲ್ಲಾಪುರ ಜಿಲ್ಲೆ ಪನ್ನಾಳ ತಾಲೂಕಿನ ಗರಪನದ ಅನಿಕೇತ ಸುಭಾಷ ಮೊಳೆ (22) ಮೃತನಾದ ಯುವಕ.

ಬುಧವಾರ ಮಧ್ಯಾಹ್ನ ಎಂಎಲ್ಐಆರ್ ಸಿ ಪಿಟಿ ಮೈದಾನದಲ್ಲಿ ತರಬೇತಿ ನಡೆಯುತ್ತಿತ್ತು.

12 ಗಂಟೆಗೆ ಹಗ್ಗೆ ಏರಿ ಇಳಿಯುವ ತರಬೇತಿ ಪಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಹಗ್ಗ ಏರಿ ಇಳಿದು ಒಂದು ಹೆಜ್ಜೆ ಮುಂದೆ ಹೊಗುತ್ತಿದ್ದಂತೆ ಅನಿಕೇತ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಮಿಲ್ಟ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಿಸದೆ ರಾತ್ರಿ 10.30ಕ್ಕೆ ಆತ ಸಾವನ್ನಪ್ಪಿದ್ದಾನೆ. ಈ ಕುರಿತು ದೈಹಿಕ ತರಬೇತಿ ಅಧಿಕಾರಿ ಮೇಜರ್ ತಾಪಾ ಪೊಲೀಸ್ ದೂರು ನೀಡಿದ್ದಾರೆ.

GENERAL OFFICER COMMANDING-IN-CHIEF VISITS MLIRC

Related Articles

Back to top button