Kannada NewsKarnataka News

*ಜಾತ್ರೆಗಳಲ್ಲಿ ಪೀಪಿ ಮಾರಾಟದ ನೇಪದಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬಳ್ಳಾರಿ ಪೊಲೀಸರ ವಿಶೇಷ ತಂಡದಿಂದ ಭರ್ಜರಿ ಕಾರ್ಯಚರಣೆ ನಡೆಸಲಾಗಿದ್ದು, ಸರಗಳ್ಳತನ ಮಾಡುತ್ತಿದ್ದ ಇಬ್ಬರು ಐನಾತಿ ಕಳ್ಳರ ಬಂಧನ ಮಾಡಲಾಗಿದೆ.‌

ಒಟ್ಟು 06 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.  ಸಂಡೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ. ಚೋರನೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ಹಾಗೂ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣದಲ್ಲಿ ಬಂಧಿತ ಆರೋಪಿಗಳು ಭಾಗವಹಿಸಿದರು. 

ಹೊಸಪೇಟೆ ತಾಲೂಕಿನ ಕಾರಿಗನೂರು ಕ್ಯಾಂಪ್ ನಿವಾಸಿಗಳಾದ ಚನ್ನವ್ವ (25) ಹಾಗೂ ಹನುಮವ್ಬ (21)  ಈ ಇಬ್ಬರು ಆರೋಪಿಗಳುನ್ನು ಬಂಧಿಸಲಾಗಿದೆ.‌ ಬಂಧಿತರಿಂದ ಅಂದಾಜು 11 ಲಕ್ಷದ 19 ಸಾವಿರ ಮೌಲ್ಯದ 238 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಳ್ಳಾಗಿದೆ.‌

ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚಿಗೆ ಬಸ್ಸುಗಳಲ್ಲಿ, ಜಾತ್ರೆಗಳಲ್ಲಿ, ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದವು, ಕೂಡಲೇ ನಿಗಾವಹಿಸಿ, ಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿಲಾಗಿತ್ತು. ಜಾತ್ರೆಗಳಲ್ಲಿ ಪೀಪಿ ಮಾರಾಟ ಮಾಡುವ ಮೂಲಕ ಆರೋಪಿಗಳು ಸರಗಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರಕರಣವನ್ನು ಬೇಧಿಸಿದ ವಿಶೇಷ ಪೊಲೀಸರ ತಂಡಕ್ಕೆ ಎಸ್ಪಿ ರಂಜೀತ್ ಭಂಡಾರು ಅವರಿಂದ ಪ್ರಶಂಸೆ ವ್ಯಕ್ತವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button