Film & Entertainment

*ಹಾಸ್ಯ ನಟ ಚಿಕ್ಕಣ್ಣಗೆ ಪೊಲೀಸ್ ನೋಟಿಸ್*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ನ್ನು ಬಂಧಿಸಿರುವ ಪೊಲೀಸರು ಇದೀಗ ಹಾಸ್ಯ ನಟ ಚಿಕ್ಕಣ್ಣಗೂ ನೋಟಿಸ್ ನೀಡಿದ್ದಾರೆ.

Home add -Advt

ದರ್ಶನ್ ಹಾಗೂ ಗ್ಯಾಂಗ್ ಪ್ರಕರಣ್ದಲ್ಲಿ ಈಗ ಚಿಕ್ಕಣ್ಣಗೂ ಸಂಕಷ್ಟ ಶುರುವಾಗಿದೆ. ರೇಣುಕಾಸ್ವಾಮಿ ಹತ್ಯೆಗೂ ಮುನ್ನ ನಟ ದರ್ಶನ್ ಹಾಗೂ ಗ್ಯಾಂಗ್ ಖಾಸಗಿ ಹೋಟೆಲ್ ನಲ್ಲಿ ಪಾರ್ಟಿ ಮಾಡಿತ್ತು. ಇ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಭಾಗಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಭರ್ಜರಿ ಎಣ್ಣೆ ಪಾರ್ಟಿ ಬಳಿಕ ನಟ ದರ್ಶನ್, ರೇಣುಕಾಸ್ವಾಮಿಯನ್ನು ಕೂಡಿಹಾಕಿದ್ದ ಆರ್.ಆರ್.ನಗರದ ಪಟ್ಟಣಗೆರೆ ಶೆಡ್ ಗೆ ಹೋಗಿದ್ದಾರೆ. ಶೆಡ್ ನಲ್ಲಿ ದರ್ಶನ್ ಹಾಗೂ ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದೆ. ಹತ್ಯೆ ಪ್ರಕರಣಕ್ಕೂ ನಟ ಚಿಕ್ಕಣ್ಣಗೂ ಯಾವುದೇ ಸಂಬಂಧವಿಲ್ಲ. ಆದರೆ ಅಂದು ದರ್ಶನ್ ಶೆಡ್ ಗೆ ಹೋಗುವ ಮೊದಲು ಹೋಟೆಲ್ ನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಚಿಕ್ಕ ಭಾಗಿಯಾಗಿದ್ದಕ್ಕೆ ವಿಚಾರಣೆಗೆ ಹಾಜರಾಗುವಂತೆ ಚಿಕ್ಕಣ್ಣಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

Related Articles

Back to top button