Film & EntertainmentKannada NewsLatest

*BREAKING: ನಟ ದುನಿಯಾ ವಿಜಯ್, ಪತ್ನಿ ನಾಗರತ್ನ ದಾಂಪತ್ಯ ಅಂತ್ಯ*

ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್

ಪ್ರಗತಿವಾಹಿನಿ ಸುದ್ದಿ: ನಟ ದುನಿಯಾ ವಿಜಯ್ ಹಾಗೂ ಪತ್ನಿ ನಾಗರತ್ನ ದಾಂಪತ್ಯ ಜೀವನ ಅಂತ್ಯಗೊಂಡಿದ್ದು, ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ.

ನ್ಯಾ. ಡಿ.ಕೆ.ಸಿಂಗ್, ನ್ಯಾ.ಹೆಚ್.ಶಾಂತಿಭೂಷಣ್ ಅವರದಿದ್ದ ಹೈಕೋರ್ಟ್ ಪೀಠ ದುನಿಯಾ ವಿಜಯ್ ಹಾಗೂ ಪತ್ನಿ ನಾಗರತ್ನ ಅವರಿಗೆ ವಿಚ್ಛೇದನ ಮಂಜೂರು ಮಾಡಿದೆ. ಅಲ್ಲದೇ ಪತ್ನಿಗೆ 2 ಕೋಟಿ ರೂಪಾಯಿ ಜೀವನಾಂಶ ನೀಡುವಂತೆ ದುನಿಯಾ ವಿಜಯ್ ಗೆ ಆದೇಶ ಹೊರಡಿಸಿದೆ.

ಪತ್ನಿ ನಾಗರತ್ನ ಅವರ ಜೀವನ ನಿರ್ವರ್ಹಣೆಗೆ ಜೀವನಾಂಶ ಹಾಗೂ ಮೂವರು ಮಕ್ಕಳ ಜೀವನಕ್ಕಾಗಿ ದುನಿಯಾ ವಿಜಯ್ ಅವರ ಸ್ಥಾನಮಾನ, ಹಣಕಾಸಿನ ಸ್ಥಿತಿ ಪರಿಗಣಿಸಿ ಹೈಕೋರ್ಟ್ 2 ಕೋಟಿ ರೂಪಾಯಿ ಪರಿಹಾರ ನೀಡಲು ಸೂಚಿಸಿದೆ. 2 ಕೋಟಿ ಹಣವನ್ನು ಎರಡು ತಿಂಗಳ ಒಳಗಾಗಿ ಒನ್ ಟೈಮ್ ಸೆಟ್ಲ್ ಮೆಂಟ್ ಮಾಡುವಂತೆ ಆದೇಶ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button